

ವಾಡಿ: ಅಯೋಧ್ಯೆಯಲ್ಲಿ ಜ.೨೨ರಂದು ಶ್ರೀರಾಮನ ಭವ್ಯ ಮಂದಿರ ಉದ್ಘಾಟನೆ ಹಾಗೂ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯುತ್ತಿದ್ದು, ಅದಕ್ಕೂ ಪೂರ್ವ ಪ್ರತಿ ಮನೆಗೂ ಅಯೋಧ್ಯೆಯ ಮಂತ್ರಾಕ್ಷತೆ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಶ್ರೀರಾಮ ಉತ್ಸವ ಸಮಿತಿ ಸಂಚಾಲಕ ವೀರಣ್ಣ ಯಾರಿ ಹೇಳಿದರು.
ವಾಡಿಯಲ್ಲಿ ವಿಶ್ವ ಹಿಂದು ಪರಿಷತ್, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹಾಗೂ ರಾಷ್ಟೀಯ ಸ್ವಯಂ ಸೇವಕ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ಅಯೋಧ್ಯೆಯ ಮಂತ್ರಾಕ್ಷತೆ ವಿತರಣೆ ಅಭಿಯಾನದಲ್ಲಿ ಮಾತನಾಡಿ, ಪಟ್ಟಣದ ಎಲ್ಲ ೨೩ ವಾರ್ಡ್ಗಳಲ್ಲಿ ಸಂಚರಿಸಲಾಗುವುದು. ಈ ಅಭಿಯಾನಕ್ಕೆ ೨೩ ತಂಡಗಳನ್ನು ರಚಿಸಿದ್ದು, ಶ್ರೀರಾಮನ ಭಾವಚಿತ್ರ, ಕರಪತ್ರ ಮತ್ತು ಪವಿತ್ರ ಮಂತ್ರಾಕ್ಷತೆ ನೀಡಲಾಗುವುದು ಎಂದು ಹೇಳಿದರು.
ಪ್ರಮುಖರಾದ ಬಸವರಾಜ ಪಂಚಾಳ, ಸುನೀಲ್ ವರ್ಮಾ, ರಾಮಚಂದ್ರ ರಡ್ಡಿ, ಶರಣಗೌಡ ಚಾಮನೂರ, ಹರಿ ಗಲಾಂಡೆ, ಅಶೋಕ ಪವಾರ್, ಆನಂದ ಡೌಳೆ, ಸಂಜಯ ಗಾಯಕವಾಡ, ಗಣಪತರಾವ ಸುತ್ರಾವೆ, ರಾಹುಲ್ ಸಿಂದಗಿ, ಪ್ರೀತಮ್ ಜೋಷಿ, ಭಾಗಣ್ಣ ದೊರೆ, ರವಿ ನಾಯಕ, ಭರತ ರಾಠೋಡ್, ದತ್ತಾ ಖೈರೆ, ಸನ್ನಿ ವಾಲಿಯ, ಸತೀಶ ಸಾವಳಗಿ, ಸಿದ್ದೇಶ್ವರ ಚೊಪಡೆ, ಅಯ್ಯಣ್ಣ ದಂಡೋತಿ, ಅನಿತಾ ಅಗರ್ವಾಲ್, ಕಿಶನ್ ಜಾಧವ್, ಜಯಂತ ಪವಾರ್, ಬನಶಂಕರ ಮಷ್ಟೂರ್, ರವಿ ಹಡಪದ, ಮಹಾಲಿಂಗ ಶೆಳ್ಳಗಿ, ಪ್ರೇಮ ರಾಠೋಡ್, ರಾಜೀವ್ ಪಾಂಡೆ, ಜ್ವಾಲಾ ಶರ್ಮಾ, ಯಂಕಮ್ಮ ಗೌಡಗಾಂವ್, ಶರಣಮ್ಮ ಯಾದಗಿರ, ಸುಶೀಲ ವರ್ಮಾ, ಇಂಡಿ, ಸಿದ್ದಮ್ಮ ಸ್ವಾಮಿ, ವಿಶ್ವ ತಳವಾರ, ವಿಶಾಲ ನಾಯಕ, ಉಮಾದೇವಿ ಗೌಳಿ ಇತರರಿದ್ದರು.
ಅಯೋಧ್ಯೆಯಲ್ಲಿ ನಡೆಯುವ ಭವ್ಯ ಕಾರ್ಯಕ್ರಮದಲ್ಲಿ ಎಲ್ಲರಿಗೂ ಪಾಲ್ಗೊಳ್ಳಲು ಆಗಲ್ಲ. ಹೀಗಾಗಿ ಶ್ರೀರಾಮನ ಮಂತ್ರಾಕ್ಷತೆಯನ್ನು ಎಲ್ಲರಿಗೂ ಮುಟ್ಟಿಸಲಾಗುತ್ತಿದೆ. ಜ.೨೨ರಂದು ವಾಡಿಯ ಹಲವು ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಲಿದೆ. ಎಲ್ಲ ಮನೆಗಳಲ್ಲಿಯೂ ವಿಶೇಷ ಪೂಜೆ ಮತ್ತು ಸಂಜೆ ದೀಪಗಳನ್ನು ಹಚ್ಚಿ ದೀಪಾವಳಿ ಆಚರಿಸಲಾಗುವುದು. ಪ್ರತಿಯೊಬ್ಬರೂ ರಾಮನ ಆಗಮನವನ್ನು ಸಂಭ್ರಮಿಸಬೇಕು.
| ವೀರಣ್ಣ ಯಾರಿ, ಶ್ರೀರಾಮ ಉತ್ಸವ ಸಮಿತಿ ಸಂಚಾಲಕ, ವಾಡಿ