

ಕೋಟ: ವಾತ್ಸಲ್ಯ ಯೋಜನೆ ಅಡಿ ಮಾಸಾಶನ ಪಡೆದ ಮಕ್ಕಳಿಗೆ ವಿದ್ಯಾನಿಧಿ ಹಾಗೂ ಪರಿಕರ ವಿತರಣಾ ಕಾರ್ಯಕ್ರಮ ಕೋಟೇಶ್ವರದಲ್ಲಿ ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕುಂದಾಪುರ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ತಾಲೂಕಿನ ಒಟ್ಟು 9 ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ನೀಡಲಾಯಿತು.
ಗ್ರಾವಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ನಾರಾಯಣ ಪಾಲಾನ್ ಕಾರ್ಯಕ್ರಮದ ಉದ್ದೇಶ ವಿವರಿಸಿದರು. ಮಕ್ಕಳಿಗೆ ಬ್ಯಾಗ್, ಕೊಡೆ, ನೋಟ್ ಬುಕ್ ಹಾಗೂ ಓರ್ವ ವಿದ್ಯಾರ್ಥಿಯ ಕಾಲೇಜು ಶುಲ್ಕ 3,500ರೂ. ವಿತರಿಸಲಾಯಿತು.
ಪ್ರಾದೇಶಿಕ ಯೋಜನಾಧಿಕಾರಿ ಅಮೃತ, ಜಿಲ್ಲಾ ಸಮನ್ವಯ ಅಧಿಕಾರಿ ಪುಷ್ಪಲತ, ಆಡಳಿತ ಪ್ರಬಂಧಕಿ ವಂದನಾ, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಕವಿತಾ ಗೌಡ, ವಿವಿಧ ವಲಯಗಳ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು. ಸೇವಾ ಪ್ರತಿನಿಧಿ ಜಯಂತಿ ಶೆಟ್ಟಿ ಸ್ವಾಗತಿಸಿ, ವಂದಿಸಿದರು. ಗೀತಾ ನಿರೂಪಿಸಿದರು.