ನಾಲ್ಕು ಗ್ರಾಪಂಗಳಲ್ಲಿ ಮತದಾನ ಶಾಂತ

Kavital Basapura Gramapanchayat Voting
ಕವಿತಾಳ ಸಮೀಪದ ಬಸಾಪುರ ಗ್ರಾಮದಲ್ಲಿ ಮಹಿಳೆಯರು ಸೋಮವಾರ ಮತ ಚಲಾಯಿಸಲು ಸರದಿ ಸಾಲಲ್ಲಿ ನಿಂತಿರುವುದು.
Published on

ಕವಿತಾಳ: ಸಮೀಪದ ವಟಗಲ್, ಅಮೀನಗಡ, ಪಾಮನಕಲ್ಲೂರು ಮತ್ತು ಅಂಕುಶದೊಡ್ಡಿ ಗ್ರಾಪಂಗಳಿಗೆ ಸೋಮವಾರ ಶಾಂತಿಯುತ ಮತದಾನ ನಡೆಯಿತು. ಮಹಿಳೆಯರು ಬೆಳಗ್ಗೆಯಿಂದ ಸರದಿ ಸಾಲಿನಲ್ಲಿ ನಿಂತು ಆಸಕ್ತಿಯಿಂದ ಹಕ್ಕು ಚಲಾಯಿಸಿದರು. ಅಭ್ಯರ್ಥಿಗಳು, ಅವರ ಬೆಂಬಲಿಗರು ಮನೆ ಮನೆಗೆ ತೆರಳಿ ಮತದಾರರನ್ನು ಬೂತ್ ತೆರಳಿ ವೋಟ್ ಮಾಡುವಂತೆ ಮನವೊಲಿಸುವುದು ಸಾಮಾನ್ಯವಾಗಿ ಕಂಡುಬಂತು. ಅಲ್ಲಲ್ಲಿ ಸಣ್ಣಪುಟ್ಟ ವಾದ-ವಿವಾದಗಳು ಕಂಡುಬಂದವು. ಕವಿತಾಳ ಮತ್ತು ಸಿರವಾರ ಪಿಎಸ್‌ಐ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net