

ಮೂಲ್ಕಿ: ಕಾರ್ನಾಡ್ ಶ್ರೀ ಹರಿಹರ ಕ್ಷೇತ್ರದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ದೃಢಕಲಶಾಭಿಷೇಕದ ಪೂರ್ವಭಾವಿಯಾಗಿ ಮಂಗಳವಾರ ಸಂಜೆ ಕ್ಷೇತ್ರದ ತಂತ್ರಿಗಳಾದ ಶಿಬರೂರು ಗೋಪಾಲಕೃಷ್ಣ ತಂತ್ರಿ ಹಾಗೂ ಅರ್ಚಕ ಹಯಗ್ರೀವ ಪಡ್ಡಿಲ್ಲಾಯ ಪೌರೋಹಿತ್ಯದಲ್ಲಿ ವಾಸ್ತು ಹೋಮ, ವಾಸ್ತು ಪೂಜೆ, ಪ್ರಾಕಾರ ಬಲಿ, ಪ್ರಾಯಶ್ಚಿತ ಹೋಮ ನಡೆಯಿತು.
ಬುಧವಾರ ಬೆಳಗ್ಗೆ 8.30ಕ್ಕೆ ದೇವರಿಗೆ ದೃಢಕಲಶಾಭಿಷೇಕ ನೆರವೇರಲಿದೆ. ಕ್ಷೇತ್ರದ ಆಡಳಿತ ಮೊಕ್ತೇಸರ ಎಂ.ಎಚ್.ಅರವಿಂದ ಪೂಂಜ, ಜೀರ್ಣೋದ್ಧಾರ ಸಮಿತಿ ಹರ್ಷರಾಜ ಶೆಟ್ಟಿ, ಸುರೇಶ್ ರಾವ್, ಕೃಷ್ಣ ಶೆಟ್ಟಿ, ಪ್ರವೀಣ್ ಕೋಟ್ಯಾನ್, ಕೃಷ್ಣದೇವಾಡಿಗ, ದಿವಾಕರ ಕೋಟ್ಯಾನ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶಶೀಂದ್ರ ಸಾಲ್ಯಾನ್, ರವಿಕುಮಾರ್, ರಾಘವೇಂದ್ರ ರಾವ್, ನೂತನ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.