ವಸ್ತ್ರಮಠ ವೃತ್ತಿ, ಬದಕು ಎಲ್ಲರಿಗೂ ಮಾದರಿ

5 vikram 8
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಿವೃತ್ತ ಪ್ರಧಾನ ಜಿಲ್ಲಾ ನ್ಯಾಯಾಧೀಶ ಎಸ್​.ಬಿ. ವಸ್ತ್ರಮಠ ಬಡತನದಲ್ಲಿ ಹುಟ್ಟಿ ಅರಳಿದ ಮಲ್ಲಿಗೆ ಹೂವು. ಅವರು ಜೀವನದಲ್ಲಿ ದೊಡ್ಡ ಗುರಿ ಇಟ್ಟುಕೊಂಡು ಸಾಧನೆ ಮುಡಿಗೇರಿಸಿಕೊಂಡಿದ್ದಾರೆ. ಅವರ ವ್ಯಕ್ತಿತ್ವ ಇತರರಿಗೆ ಮಾದರಿ ಎಂದು ಶಿರಹಟ್ಟಿ ಸಂಸ್ಥಾನ ಮಠದ ಶ್ರೀ ಜಗದ್ಗುರು ಫಕ್ಕೀರ ಸಿದ್ಧರಾಮ ಸ್ವಾಮೀಜಿ ತಿಳಿಸಿದರು.

ನಗರದ ಆಲೂರು ವೆಂಕಟರಾವ್​ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ನಿವೃತ್ತ ಪ್ರಧಾನ ಜಿಲ್ಲಾ ನ್ಯಾಯಾಧೀಶ ಎಸ್​.ಬಿ. ವಸ್ತ್ರಮಠ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಸರ್ಕಾರಿ ನೌಕರ ಸೇವೆಯಲ್ಲಿದ್ದಾಗ ನೀತಿ, ತತ್ವ, ಸಿದ್ದಾಂತಗಳಿಗೆ ಬದ್ಧನಾಗಿ ವೃತ್ತಿ ನಿರ್ವಹಿಸಬೇಕು. ನಿವೃತ್ತಿ ನಂತರ ತನ್ನ ಅನುಭವದ ಆಧಾರದಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಬೇಕು. ಇದರಿಂದ ಜೀವನದಲ್ಲಿ ಸಾರ್ಥಕತೆ, ಸಮಾಧಾನ ಸಿಗುತ್ತದೆ ಎಂದರು.

ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿ ಮನುಷ್ಯ ಭೂಮಿ ಮೇಲೆ ನೂರು ವರ್ಷ ಬದುಕುತ್ತಾನೆ. ಹಾಗೆ ಹದ್ದು ನೂರು ವರ್ಷ ಬದುಕುವುದು. ಆದರೆ ಹದ್ದಿನ ಹಾಗೆ ಬದುಕುವುದು ಬದುಕಲ್ಲ. ಹೇಗೆ ಬದುಕಬೇಕು ಎಂಬುವುದು ಬಸವಣ್ಣವರು ವಚನದಲ್ಲಿ ಹೇಳಿದ್ದಾರೆ. ಆತ್ಮ ಸಾಕ್ಷಿ, ಮನಃ ಸಾಕ್ಷಿಯಾಗಿ ಬದುಕಬೇಕು ಎಂದರು.

ಎಸ್​.ಬಿ.ವಸ್ತ್ರಮಠ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಕೃಷಿ ಮಾರಾಟ ಇಲಾಖೆ ರಾಜ್ಯ ನಿರ್ದೇಶಕ ಶಿವಾನಂದ ಕಾಪಶಿ, ಹಿರಿಯ ನ್ಯಾಯವಾದಿ ಎ.ಸಿ.ಚಾಕಲಬ್ಬಿ, ವಸ್ತ್ರಮಠ ಕುಟುಂಬಸ್ಥರು, ಗೆಳೆಯರು, ಇತರರು ಇದ್ದರು.

ಪ್ರೊ. ಸಿದ್ದಯ್ಯ ವಸ್ತ್ರಮಠ ಸ್ವಾಗತಿಸಿದರು. ಡಾ. ಜಗದತ್ತ ಹಡಗಲಿ ನಿರೂಪಿಸಿದರು. ವಿನಾಯಕ ವಸ್ತ್ರಮಠ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net