

ವಿಟ್ಲ: ಮೂಲಸೌಕರ್ಯ ಪಡೆಯುವ ಹಕ್ಕು ಪ್ರತಿಯೊಬ್ಬರಿಗಿದೆ. ಜಾಗ ಹಾಗೂ ದಾಖಲೆಯಿದ್ದಾಗ ಮಾತ್ರ ಸರ್ಕಾರದ ಸವಲತ್ತುಗಳನ್ನು ಪಡೆಯಬಹುದು. ಹಿಂದಿನ ಅವಽಯಲ್ಲಿ ಫಲಾನುಭವಿಗಳಿಗೆ ಪಂಚಾಯಿತಿಯಿಂದ ೨೭೭ಮನೆ ವಿತರಿಸಲಾಗಿದ್ದು, ಅಡಿಸ್ಥಳದ ದಾಖಲೆ ಸರಿಯಲ್ಲದೆ ಪಲಾನುಭವಿಗಳೇ ಇಲ್ಲದಂತಾಗಿದೆ. ದಾಖಲೆ ಪತ್ರ ಇರುವ ಫಲಾನುಭವಿಗಳಿಗೆ ಪಂಚಾಯಿತಿ ಹಾಗೂ ಯೋಜನೆ ಸೇರಿ ಮನೆ ನಿರ್ಮಾಣ ಮಾಡಲಾಗುವುದು ಎಂದು ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವಿಟ್ಲ ವತಿಯಿಂದ ಅಳಿಕೆ ಗ್ರಾಮದ ಮುಳಿಯ ಒಕ್ಕೂಟದ ಸರಸ್ವತಿ ನೆಗಳಗುಳಿ ಅವರಿಗೆ ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಾತ್ಸಲ್ಯ ಮನೆ ಹಸ್ತಾಂತರ ಮಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಮಾತನಾಡಿ ಸಮಾಜದ ದುರ್ಬಲ ವರ್ಗಕ್ಕೆ ಆಸರೆ ನೀಡುವ ನಿಟ್ಟಿನಲ್ಲಿ ಕ್ಷೇತ್ರದಿಂದ ಯೋಜನೆ ಹಾಕಲಾಗಿದೆ. ಯೋಜನೆಯ ಮೂಲಕ ೨೨ ವರ್ಷಗಳಿಂದ ವಿಟ್ಲ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ವಾತ್ಸಲ್ಯ ಯೋಜನೆಯ ಮೂಲಕ ೪೫೫ ಮನೆಗಳ ಹಸ್ತಾಂತರ ಈಗಾಗಲೇ ಮಾಡಲಾಗಿದೆ. ಕಾರ್ಯಕ್ರಮ ಮಾಹಿತಿ ಸಿಕ್ಕಿ ಇನ್ನಷ್ಟು ಮಂದಿ ಯೋಜನೆಯ ಪ್ರಯೋಜನ ಪಡೆಯುವಂತಾಗಬೇಕು. ಬಡವರ ಬದುಕನ್ನು ಅರಿವ ಕೆಲಸ ನಡೆಯಬೇಕು ಎಂದರು.
ಧಾರ್ಮಿಕ ಕಾರ್ಯಕ್ರಮ ಹಾಗೂ ಮನೆಯ ಫಲಕ ಅನಾವರಣವನ್ನು ಜನಜಾಗೃತಿ ಸಮಿತಿಯ ವಲಯ ಅಧ್ಯಕ್ಷ ಬಾಲಕೃಷ್ಣ ಕಾರಂತ ಎರುಂಬು ನಡೆಸಿದರು. ಕಾರ್ಯಕ್ರಮ ಉದ್ಘಾಟನೆಯನ್ನು ಅಳಿಕೆ ಗ್ರಾಮ ಪಂಚಾಯಿತಿ ಸದಸ್ಯ ಜಗದೀಶ ಶೆಟ್ಟಿ ಮುಳಿಯ ನಡೆಸಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ಗಿರಿಜ ಬಿಟ್ಟಿಮೂಲೆ, ಭಾಗೀರಥಿ, ಕೇಂದ್ರ ಒಕ್ಕೂಟದ ಅಧ್ಯಕ್ಷ ನವೀನ್ ಚಂದ್ರ ಕಣತ್ತೂರು, ಅಳಿಕೆ ವಲಯ ಶೌರ್ಯ ತಂಡದ ಮಾಸ್ಟರ್ ದೀಪಕ್, ಮುಳಿಯ ಒಕ್ಕೂಟದ ಅಧ್ಯಕ್ಷ ಉದಯ, ಮುಳಿಯ ಭಜನಾ ಮಂದಿರದ ಅಧ್ಯಕ್ಷ ಆನಂದ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಜ್ಞಾನವಿಕಾಸ ಸಮನ್ವಯಽಕಾರಿ ದೀಪಾ ಸ್ವಾಗತಿಸಿದರು. ವಿಟ್ಲ ತಾಲೂಕು ಯೋಜನಾಽಕಾರಿ ರಮೇಶ್ ಪ್ರಸ್ತಾವನೆಗೈದರು. ಸೇವಾ ಪ್ರತಿನಿಽ ವಿನಯ ವಂದಿಸಿದರು. ಮೇಲ್ವಿಚಾರಕಿ ಮಾಲತಿ ಕಾರ್ಯಕ್ರಮ ನಿರೂಪಿಸಿದರು.