

ನಾಲತವಾಡ: ನಾರಾಯಣಪುರ- ನಾಲತವಾಡ ಮಾರ್ಗವಾಗಿ ವಾಸ್ಕೋಗೆ ತೆರಳಲು ನೂತನ ಬಸ್ ಆರಂಭಕ್ಕೆ ಸೋಮವಾರ ಪೂಜೆ ಸಲ್ಲಿಸುವ ಮೂಲಕ ಪಟ್ಟಣದಲ್ಲಿ ಚಾಲನೆ ನೀಡಲಾಯಿತು.
ಗೋವಾ ರಾಜ್ಯಕ್ಕೆ ಬಸ್ ಆರಂಭಿಸಬೇಕು ಎನ್ನುವ ಜನರ ಬಹು ದಿನಗಳ ಬೇಡಿಕೆಗೆ ಸ್ಪಂದಿಸಿದ ಮುದ್ದೇಬಿಹಾಳ ಘಟಕ ವ್ಯವಸ್ಥಾಪಕ ಅಬುಬಕರ್ ಮಧಬಾವಿ ಅವರಿಗೆ ಸ್ಥಳೀಯರು ಅಭಿನಂದನೆ ಸಲ್ಲಿಸಿದರು.
ಚಾಲಕ, ನಿರ್ವಾಹಕರಿಗೆ ವ್ಯಾಪಾರಸ್ಥ ಬಸಣ್ಣ ಮೇಗಲಮನಿ ಸನ್ಮಾನಿಸಿದರು. ನಾರಾಯಣಪುರದಿಂದ ಸಂಜೆ 4 ಗಂಟೆಗೆ ಹೊರಡುವ ಬಸ್ ನಾಲತವಾಡದಿಂದ 4.20 ಕ್ಕೆ ತೆರಳುತ್ತದೆ. ಮುದ್ದೇಬಿಹಾಳ ಬಾಗಲಕೋಟೆ ಮೂಲಕ ವಾಸ್ಕೋಗೆ ಮರುದಿನ ಬೆಳಗ್ಗೆ 5.30ಕ್ಕೆ ತಲುಪುತ್ತದೆ, ನಂತರ ಸಂಜೆ 7 ಗಂಟೆಗೆ ವಾಸ್ಕೋದಿಂದ ನಿರ್ಗಮಿಸಿ ನಾಲತವಾಡ ಪಟ್ಟಣಕ್ಕೆ ಬೆಳಗ್ಗೆ 6 ಗಂಟೆಗೆ ತಲುಪುತ್ತದೆ.
ಬಸ್‌ಗೆ ಪೂಜೆ ಸಲ್ಲಿಸುವ ವೇಳೆ ಸುರೇಶ ಹಿರೇಮಠ, ಮುತ್ತಣ್ಣ ಸ್ಥಾವರಮಠ, ಚನ್ನಪ್ಪಗೌಡ ಹಂಪನಗೌಡ್ರ, ಜಗದೀಶ ಇಲಕಲ್, ನಿಂಗಣ್ಣ ವಾಲಿ, ಚನ್ನಪ್ಪ ಪತೇಪೂರ, ಸುರೇಶ ಧರೆಗೋಳ, ಸಂಗಣ್ಣ ಬಿರಾದಾರ, ಸಾರಿಗೆ ನಿಯಂತ್ರಕ ಆದಪ್ಪ ಗಂಗನಗೌಡ್ರ, ಚಾಲಕ ಎಂ.ಎಸ್.ಹುಡೇದ ಇತರರಿದ್ದರು.