ವಾಸವಿ ಸಹಸ್ರ ಕುಂಕುಮಾರ್ಚನೆ

kunkumarchane
Published on

ಕುಶಾಲನಗರ: ಇಲ್ಲಿನ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಆರ್ಯವೈಶ್ಯ ಮಂಡಳಿಯ ಸಹಯೋಗದಲ್ಲಿ ವಾಸವಿ ದೀಕ್ಷಾ ಸಮಿತಿ ನೇತೃತ್ವದಲ್ಲಿ ಶನಿವಾರ ವಾಸವಿ ಸಹಸ್ರ ಕುಂಕುಮಾರ್ಚನೆ ಕಾರ್ಯಕ್ರಮ ನಡೆಯಿತು.

ಆರ್ಯವೈಶ್ಯ ಜನಾಂಗ ಮತ್ತು ಇಡೀ ಸಮಾಜದ ಸುಖ, ಶಾಂತಿಗಾಗಿ ೯೨ ಮಹಿಳೆಯರು ಮತ್ತು ಪುರುಷರು ಪಾಲ್ಗೊಂಡಿದ್ದರು. ದೇವಸ್ಥಾನದ ಅರ್ಚಕರಾದ ಯೋಗೀಶ್ ಭಟ್ ಮತ್ತು ಗಿರೀಶ್ ಭಟ್ ನೇತೃತ್ವದಲ್ಲಿ ಮಾತ್ರ ಘೋಷಗಳನ್ನು ನಡೆಸಲಾಯಿತು.

ಭಾರತ ಸೇರಿದಂತೆ ಇಡೀ ವಿಶ್ವ ಈಗ ಒಂದು ರೀತಿಯ ಆತಂಕದಲ್ಲಿ ಇದೆ. ರಷ್ಯ ಮತ್ತು ಉಕ್ರೇನ್ ಯುದ್ಧ ಆರಂಭವಾಗಿ ವರ್ಷಗಳು ಕಳೆದಿದೆ. ಈಗ ಭಾರತ ಮತ್ತು ಪಾಕಿಸ್ತಾನ ಯುದ್ಧ ಭೀತಿಯಲ್ಲಿ ಇದೆ. ಇದರಿಂದ ಸಾರ್ವಜನಿಕರು ಆತಂಕದಲ್ಲಿ ದಿನದೂಡುವಂತೆ ಆಗಿದೆ. ಇಂತಹ ಘಟನೆಗಳು ಮುಂದಿನ ದಿನಗಳಲ್ಲಿ ನಶಿಸಿ ಹೋಗಿ ವಿಶ್ವ ಶಾಂತಿಗಾಗಿ ವಾಸವಿ ಸಹಸ್ರ ಕುಂಕುಮಾರ್ಚನೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ಎಂದು ವಾಸವಿ ದೀಕ್ಷಾ ಸಮಿತಿ ಅಧ್ಯಕ್ಷ ಕೆ.ಜೆ.ಚಿನ್ನಸ್ವಾಮಿ ತಿಳಿಸಿದರು.

ವಾಸವಿ ದೀಕ್ಷಾ ಸಮಿತಿ ಕಾರ್ಯದರ್ಶಿ ಬಿ.ಎಲ್.ಸತೀಶ್, ಖಜಾಂಚಿ ವಾಣಿಶ್ರೀ, ನಿರ್ದೇಶಕರಾದ ಡಿ.ಎಸ್.ರಮೇಶ್, ವಿ.ಆರ್.ಮಂಜುನಾಥ್, ನಾಗಮಣಿ, ಕೆ.ಎಸ್.ನಾಗೇಶ್, ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಬಿ.ಎಲ್.ಉದಯಕುಮಾರ್, ಕಾರ್ಯದರ್ಶಿ ಅಶೋಕ್, ನಿರ್ದೇಶಕರಾದ ಎಂ.ಪಿ.ಸತ್ಯನಾರಾಯಣ, ಬಿ.ಆರ್.ನಟರಾಜ್, ಮಹಿಳಾ ಮಂಡಳಿಯ ಅಧ್ಯಕ್ಷೆ ಲಕ್ಷ್ಮಿ ಶ್ರೀನಿವಾಸ್ ಇತರೇ ನೂರಾರು ಆರ್ಯವೈಶ್ಯ ಕುಲಾಭಾಂದವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net