ವಾಸವಿದೇವಿ ಭಾವಚಿತ್ರ ಮೆರವಣಿಗೆ

ಗುರುಗುಂಟಾದಲ್ಲಿ ಆರ್ಯವೈಶ್ಯ ಸಮುದಾಯದಿಂದ ವಾಸವಿದೇವಿ ಭಾವಚಿತ್ರ ಮೆರವಣಿಗೆ ಜರುಗಿತು.
ಗುರುಗುಂಟಾದಲ್ಲಿ ಆರ್ಯವೈಶ್ಯ ಸಮುದಾಯದಿಂದ ವಾಸವಿದೇವಿ ಭಾವಚಿತ್ರ ಮೆರವಣಿಗೆ ಜರುಗಿತು.
Published on

ಗುರುಗುಂಟಾ: ಗುರುಗುಂಟಾ ಗ್ರಾಮದಲ್ಲಿ ಬುಧವಾರ ಆರ್ಯವೈಶ್ಯ ಸಮುದಾಯದಿಂದ ಶ್ರೀ ವಾಸವಿ ಜಯಂತಿ ಅದ್ದೂರಿಯಾಗಿ ಆಚರಿಸಲಾಯಿತು.

ಬೆಳಗ್ಗೆ ಶ್ರೀ ಕನ್ಯಕಾಪರಮೇಶ್ವರಿ ಮೂರ್ತಿಗೆ ಅಭಿಷೇಕ, ಕುಂಕುಮಾರ್ಚನೆ ಸೇರಿ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಿದವು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಕಲ ಜನಪದ ವಾದ್ಯಮೇಳದೊಂದಿಗೆ ಶ್ರೀ ವಾಸವಿ ದೇವಿ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ನಂತರ ವಾಸವಿ ಕಲ್ಯಾಣ ಮಂಟಪದಲ್ಲಿ ಮಹಿಳೆಯರಿಗೆ ಉಡಿ ತುಂಬುವುದು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಆರ್ಯವೈಶ್ಯ ಸಮಾಜದ ಅಧ್ಯಕ್ಷ ಆರ್.ಜನಾರ್ದನ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಶೋಕ ಇಲ್ಲೂರ್, ಮಹಿಳಾ ಸಂಘದ ಅಧ್ಯಕ್ಷೆ ಆರ್.ವಿಜಯಲಕ್ಷ್ಮೀ, ಪ್ರಧಾನ ಕಾರ್ಯದರ್ಶಿ ಸುಜಾತಾ ಮಿರಿಯಾಳ್, ಖಜಾಂಚಿ ವಿಜಯಲಕ್ಷ್ಮೀ ಇಲ್ಲೂರ್, ಪ್ರಮುಖರಾದ ನಾಗರಾಜ ಕಿನ್ನಾಳ, ಆನಂದ್ ತುರ್ವಿಹಾಳ್, ಮಾಣಿಕ್ ಮಿರಿಯಾಳ್, ಕೃಷ್ಣಾಶೆಟ್ಟಿ ಕಿನ್ನಾಳ್, ಆರ್.ವಿಠೋಬ ಶೆಟ್ಟಿ, ಆರ್.ಅಮರೇಶ, ಆರ್. ವೆಂಕಟೇಶ, ಭಾರತಿ ಕಿನ್ನಾಳ್, ಆರ್.ಸಂಗೀತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net