

ರಾಯಚೂರು ಆರ್ಯವೈಶ್ಯ ಸಮಾಜದಿಂದ ನಗರದ ನಗರೇಶ್ವರ ದೇವಸ್ಥಾನ ಸಮಿತಿಯಿಂದ ಮೇ.೦೩ರಿಂದ ೦೭ರವರೆಗೆ ವಾಸವಿ ಜಯಂತಿಯನ್ನು ವಿಜೃಂಭಣೆಯಿAದ ಆಚರಣೆ ಮಾಡಲಾಗುವುದು ಎಂದು ಸಮಾಜದ ಅಧ್ಯಕ್ಷ ಸಾವಿತ್ರಿ ಪುರುಷೋತ್ತಮ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೇ.೩ರಂದು ಬೆಳಿಗ್ಗೆ ೫.೩೦ಕ್ಕೆ ಸುಪ್ರಭಾತ, ನಂತರ ಧ್ವಜಾರೋಹಣ, ಕಳಸ ಸ್ಥಾಪನೆ, ಪಂಚಾಮೃತ ಅಭಿಷೇಕ, ನಂತರ ಸಮಾಜದ ಮಹಿಳೆಯರಿಂದ ನಗರದ ಗೀತಾ ಮಂದಿರದಿAದ ನಗರೇಶ್ವರ ದೇವಸ್ಥಾನದವರೆಗೆ ಕಳಸದೊಂದಿಗೆ ಮೆರವಣಿಗೆ ನಡೆಸಲಾಗುವುದು. ಸಂಜೆ ೬.೩೦ಕ್ಕೆ ಮಕ್ಕಳಿಂದ ಭರತನಾಟ್ಯ,
ರಾತ್ರಿ ೮ ರಿಂದ ವಾಸವಿ ಮಾತೆಯ ಸಿಂಹವಾಹನ ಉತ್ಸವ ಜರುಗಲಿದೆ. ಮೇ.೪ರಂದು ಬೆಳಿಗ್ಗೆ ೫.೩೦ರಿಂದ ದೇವಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಲಿದ್ದು, ಸಂಜೆ ೬:೫ ಗಂಟೆಗೆ ವಾಸವಿಮಾತೆಯ ಸಿಂಹವಾಹಿನಿ ಅಲಂಕಾರ ದರ್ಶನ ನಂತರ ರಾತ್ರಿ ೮:೫ಕ್ಕೆ ಮಾತೆಯ ಗಜವಾಹನ ಉತ್ಸವ ಜರುಗಲಿದ್ದು,
ಮೇ.೫ಕ್ಕೆ ಅಶ್ವ ವಾಹನ, ಮೇ.೬ಕ್ಕೆ ಕಾಮದೇನು, ಕಲ್ಪವೃಕ್ಷ ವಾಹನ ಉತ್ಸವ ಜರುಗಲಿದೆ. ಮೇ.೭ ರ ಸಂಜೆ ೫.೩೦ಕ್ಕೆ ವಾಸವಿ ಮಾತೆಯ ಮೆರವಣಿಗೆ, ೬.೫ಕ್ಕೆ ವಾವಿ ಮಾತೆಗೆ ಬೆಳ್ಳಿಕವಚ ಅಲಂಕಾರ ದರ್ಶನ ನಡೆಯಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಚಿರಗಂಬಟ್ಲ ಪದ್ಮರಾಜ,ಇಲ್ಲೂರು ಗೋಪಾಲಶೆಟ್ಟಿ, ಬಿ.ಜಗದೀಶ ಗುಪ್ತಾ, ಕೆ.ಸಿ.ವೀರೇಶ ಇದ್ದರು.