

ಹೊಸಪೇಟೆ: ಶ್ರೀ ವಾಸವಿ ಜಯಂತಿ ನಿಮಿತ್ತ ಆರ್ಯವೈಶ್ಯ ಸಂಘದಿಂದ ಇಲ್ಲಿನ ಮೇನ್ ಬಜಾರದಲ್ಲಿರುವ ನಗರೇಶ್ವರ ದೇಗುಲದಿಂದ ಪೂರ್ಣಕುಂಭದೊಂದಿಗೆ ಕುಲದೇವತೆಯ ಭವ್ಯ ಮೆರವಣಿಗೆ ಬುಧವಾರ ನಡೆಯಿತು.
ಶ್ರೀವಾಸವಿ ದೇಗುಲದಲ್ಲಿ ಕಳಸ ಪೂಜೆ, ತೊಟ್ಟಿಲೋತ್ಸವ ನಡೆಯಿತು. ಸುಮಂಗಲೆಯರಿಂದ ಮಡಿಪಲಕ್ಕಿ ಸಮರ್ಪಣೆ, ತುಲಾಭಾರ ಸೇವೆ, ಕನ್ಯಕಾ ಪೂಜೆ ನಡೆಯಿತು. ಯುವ ಸಮುದಾಯದಿಂದ ಸ್ವಯಂಪ್ರೇರಿತ ರಕ್ತ ದಾನ ಶಿಬಿರ ನಡೆಯಿತು. ಡಾ.ಸೋಮಶೇಖರ ಶಿಬಿರಕ್ಕೆ ಚಾಲನೆ ನೀಡಿದರು. ಎಲುಬಿನ ಸಾಂದ್ರತೆ ಉಚಿತ ಪರೀಕ್ಷೆ ಹಾಗೂ ಧಾರ್ಮಿಕ ಸಭೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯ ನಡೆಸಲಾಯಿತು. ವಾಸವಿ ದೇಗುಲಕ್ಕೆ ಅರಳಿಹಳ್ಳಿ ಕುಶಾಲ ರಥ ಸಮರ್ಪಿಸಿದರು.