ಬುಧವಾರ ರಕ್ತದಾನ ಶಿಬಿರ

vasavi
Published on

ಕುಶಾಲನಗರ:

ಕುಶಾಲನಗರದ ವಾಸವಿ ಯುವಜನ ಸಂಘ ಮತ್ತು ಶ್ರೀಮತ್ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್ ವತಿಯಿಂದ ವಾಸವಿ ಜಯಂತಿ ಅಂಗವಾಗಿ ಬುಧವಾರ (ಏ.16) ಕುಶಾಲನಗರದ ಬೈಪಾಸ್ ರಸ್ತೆಯ ವಾಸವಿ ಮಹಲ್ ಹಿಂಭಾಗ ರಕ್ತದಾನ ಶಿಬಿರವನ್ನು ಕೊಡಗು ಜಿಲ್ಲಾ ಆಸ್ಪತ್ರೆ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ. ಪ್ರವೀಣ್ ತಿಳಿಸಿದ್ದಾರೆ.

ನಮ್ಮ ಸಂಘದ ವತಿಯಿಂದ ಹಲವಾರು ವರ್ಷಗಳಿಂದ ರಕ್ತದಾನ ಶಿಬಿರ ಆಯೋಜಿಸುತ್ತಾ ಬರಲಾಗಿದೆ. ಮಡಿಕೇರಿಯಲ್ಲಿ ಜಿಲ್ಲಾ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜು ಇರುವುದರಿಂದ ಬಹಳಷ್ಟು ಶಸ್ತ್ರಚಿಕಿತ್ಸೆಗಳು ಇಲ್ಲೇ ನಡೆಯುತ್ತವೆ ಮತ್ತು ತುರ್ತು ಪ್ರಥಮ ಚಿಕಿತ್ಸೆ ಸಿಗುತ್ತದೆ. ಈ ಹಿನ್ನಲೆಯಲ್ಲಿ ರಕ್ತದ ಅವಶ್ಯಕತೆ ಬಹಳ ಇರುತ್ತದೆ. ಹಾಗಾಗಿ ರಕ್ತದಾನ ಶಿಬಿರಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಿಗಳು ಪಾಲ್ಗೊಂಡು ರಕ್ತದಾನ ಮೂಲಕ ರಕ್ತದ ಅಭಾವ ನೀಗಿಸಲು ಸಹಕರಿಸಬೇಕಾಗಿ ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಹೆಚ್ಚಿನ ಮಾಹಿತಿಗೆ 7019167576, 7338249044 ಮೊಬೈಲ್ ಸಂಪರ್ಕಿಸಲು ಕೋರಿದರು.

ಸಂಘದ ಉಪಾಧ್ಯಕ್ಷ ವಿ. ವೈಶಾಖ್, ವಿ.ಜೆ. ಬಾಲಾಜಿ, ಕಾರ್ಯದರ್ಶಿ ಬಿ.ಎನ್. ಅಂಜನ್,

ಸಹ ಕಾರ್ಯದರ್ಶಿ ನಾಗಶ್ರೇಯಸ್ಸ್, ನಿರ್ದೇಶಕರಾದ ರವಿಪ್ರಕಾಶ್, ನಿಖಿಲ್ ಮತ್ತು ಗೌತಮ್ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net