

ಶನಿವಾರಸಂತೆ: ಸಮೀಪದ ದೊಡ್ಡಕೊಡ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪಾಲಕರ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಶಾಲಾ ಪಾಲಕರ ಸಮ್ಮುಖದಲ್ಲಿ ನಡೆಸಲಾಯಿತು.
ನಿಕಟಪೂರ್ವ ಅಧ್ಯಕ್ಷ ಕೆ.ಎ.ನಾಗೇಶ್ ಅವರ ತೆರವಾದ ಸ್ಥಾನಕ್ಕೆ ನಡೆದ ಆಯ್ಕೆ ಪ್ರಕ್ರಿಯಲ್ಲಿ ಜಿ.ವಸಂತ್ ಅವರನ್ನು ನೂತನ ಅಧ್ಯಕ್ಷರಾಗಿ ಮತ್ತು ಮುಬೀನಾ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ನಿಕಟಪೂರ್ವ ಅಧ್ಯಕ್ಷ ಕೆ.ಎ.ನಾಗೇಶ್, ನೂತನ ಅಧ್ಯಕ್ಷ ಜಿ.ವಸಂತ್ ಮಾತನಾಡಿದರು. ಸಾರಿಗೆ ಇಲಾಖೆ ನಿವೃತ್ತ ಅಧೀಕ್ಷಕ ಶಿವಣ್ಣ ಅವರು ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಿದ ಸ್ವೆಟರ್, ಟೋಪಿಗಳನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಶಿಕ್ಷಕ ಎಚ್.ಎನ್.ಮಂಜುನಾಥ್, ಶಿಕ್ಷಕರಾದ ಮಹಮದ್ ಫಯಾಜ್, ನವಾಮಿ ಕೃಪಾಲತಾ, ಚೈತ್ರಲೇಖಾ ಮುಂತಾದವರು ಹಾಜರಿದ್ದರು.