

ವಿಜಯವಾಣಿ ಸುದ್ದಿಜಾಲ ಉಡುಪಿ
ಶಾಲೆಯಲ್ಲಿ ಕಲಿಯುವ ವಿದ್ಯೆ ಹೊಟ್ಟೆಪಾಡಿನದ್ದಾಗಿದೆ. ಅದೊಂದು ನೈವೇದ್ಯ ವಿದ್ಯೆ. ಆದರೆ, ಜನ್ಮಾಂತರದಲ್ಲಿಯೂ ನಮ್ಮೊಂದಿಗೆ ಬರುವ ವಿದ್ಯೆ ಇದ್ದರೆ ಅದು ಸನಾತಮ ಧರ್ಮದ ವೇದ ವಿದ್ಯೆ ಮಾತ್ರ. ಅದನ್ನು ಎಳವೆಯಲ್ಲೇ ಮಕ್ಕಳು ಕಲಿತರೆ ಸಾಧನೆಗೆ, ಮುಂದಿನ ಭವಿಷ್ಯಕ್ಕೆ ಅನುಕೂಲವಾಗಲಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಶಿಬಿರದಲ್ಲಿ ಗಂಡು ಮಕ್ಕಳಿಗೆ ಸಂಧ್ಯಾವಂದನೆ, ಸೂಕ್ತ, ದ್ವಾದಶ ಸ್ತೋತ್ರಗಳು, ಹೆಣ್ಣು ಮಕ್ಕಳಿಗೆ ಲಕ್ಷ್ಮೀ ಶೋಬಾನೆ, ಹೂ ಕಟ್ಟುವುದು, ಬತ್ತಿ ಹೊಸೆಯುವುದು, ರಂಗವಲ್ಲಿ ಹಾಕುವುದು ಇತ್ಯಾದಿ ಸಂಸ್ಕಾರಯುತ ದಿನಚರಿಗಳನ್ನು ಕಲಿಸಲಾಯಿತು.
ಗೋಪಿಚಂದನ ಧಾರಣೆಯಿಂದ ಸಂಸ್ಕಾರ ಲಭಿಸುತ್ತದೆ. ಸಂಸ್ಕೃತಿಯ ಮಹತ್ವ ಅರಿವಾಗುತ್ತದೆ. ಇದು ಶ್ರೀಕೃಷ್ಣ ಮೆಟ್ಟಿದ ಮಣ್ಣಾಗಿದ್ದರಿಂದ ಅದರಿಂದ ಕೃಷ್ಣಪ್ರಜ್ಞೆ ಜಾಗೃತಗೊಳಿಸುತ್ತದೆ. ಸ್ತ್ರೀ-ಪುರುಷರಾದಿಯಾಗಿ ಎಲ್ಲರೂ ಗೋಪಿಚಂದನ ಧಾರಣೆ ಮಾಡಬೇಕು. | ಸುಶ್ರೀಂದ್ರ ತೀರ್ಥ ಶ್ರೀಪಾದರು. ಪುತ್ತಿಗೆ ಮಠದ ಕಿರಿಯ ಯತಿ.