

ಹುಬ್ಬಳ್ಳಿ: ಅಖಿಲ ಭಾರತ ತೆರಿಗೆ ಸಲಹೆಗಾರರ ಸಂಸ್ಥೆಯ 2024-25ನೇ ಸಾಲಿಗೆ ಅಧ್ಯಕ್ಷರಾಗಿ ಹುಬ್ಬಳ್ಳಿಯ ವಸಂತ ಲದವಾ ನೇಮಕಗೊಂಡಿದ್ದಾರೆ. ಮೈಸೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಲದವಾ ಅವರು ಮೊದಲು ರಾಷ್ಟ್ರೀಯ ನಿರ್ದೇಶಕರಾಗಿ ಆಯ್ಕೆಯಾದರು. ಬಳಿಕ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಶ್ರೀಧರ ಪಾರ್ಥಸಾರಥಿ, ಕೆ.ವಿ. ಲಿಂಗರಾಜು, ಉತ್ತಮ ಪಡಿವೇಲು, ಯಶ್ವಂತರಾಜ ನಿಗಿರೆಡಿ, ಶಿವರಾಜ ಎ.ಕೆ., ಎಸ್.ಎನ್. ಪ್ರಸಾದ, ಶಶಿಕಾಂತ ಆರ್. ಸಿ. ಎಂ. ವೆಂಕಟೇಶ ಹಾಗೂ ಅನೇಕ ರಾಜ್ಯಗಳ ಪ್ರತಿನಿಧಿಗಳು ಹಾಜರಿದ್ದರು.