ವರೂರು ಎಜಿಎಂ ಕಾಲೇಜಿಗೆ ನ್ಯಾಕ್​ ಕಮೀಟಿಯಿ ಬಿ++ ಮಾನ್ಯತೆ

New GN 2
Published on

ಹುಬ್ಬಳ್ಳಿ : ವರೂರಿನ ಎಜಿಎಂ ರೂರಲ್​ ಕಾಲೇಜ್​ ಆಫ್​ ಇಂಜಿನೀಯರಿಂಗ್​ ಆ್ಯಂಡ್​ ಟೆಕ್ನಾಲಜಿ ಕಾಲೇಜಿಗೆ ನ್ಯಾಕ್​ ಕಮೀಟಿಯಿಂದ ಬಿ++ ಮಾನ್ಯತೆ ಲಭಿಸಿದೆ.

ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ರಾಷ್ಟ್ರಸಂತ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು, ಕಾಲೇಜಿನಲ್ಲಿರುವ ಉತ್ತಮ ಸೌಲಭ್ಯ ಹಾಗೂ ಕಲಿಕಾ ವಾತಾವರಣಕ್ಕೆ ಈ ಮಾನ್ಯತೆ ಲಭಿಸಿದೆ ಎಂದು ಹೇಳಿದರು.

ಈ ಶಿಕ್ಷಣ ಸಂಸ್ಥೆಯಲ್ಲಿ ಹೊಸದಾಗಿ ಎಂಬಿಎ, ಎಂಸಿಎ ಕೋರ್ಸ್​ ಹಾಗೂ ರಿಸರ್ಚ್​ ಸೆಂಟರ್​ ಆರಂಭಿಸಲಾಗಿದೆ. ವಿವಿಧ ಕೋರ್ಸ್​ಗಳಿಗೆ ಈಗಿರುವ ವಿದ್ಯಾಥಿರ್ಗಳ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ ಎಂದರು.

ಹೊಸದಾಗಿ ಆರಂಭವಾಗಿರುವ ಎಂಬಿಎ ಮತ್ತು ಎಂಸಿಎಗೆ ಕೋರ್ಸ್​ಗಳಿಗೆ ತಲಾ 60 ವಿದ್ಯಾಥಿರ್ಗಳನ್ನು ದಾಖಲು ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಇಲ್ಲಿನ ಶೈಕ್ಷಣಿಕ ವಾತಾವರಣ, ನುರಿತ ಶಿಕ್ಷಕರ ಪಾಠ ಹಾಗೂ ಕಡಿಮೆ ಶುಲ್ಕದ ಕಾರಣಕ್ಕೆ ಇಲಲ್ಲಿ ಕಲಿತ ಅನೇಕ ವಿದ್ಯಾಥಿರ್ಗಳು ಇಂದು ಲಕ್ಷಾಂತರ ರೂ.ಸಂಬಳ ಪಡೆಯುತ್ತಿದ್ದಾರೆ. ಬಡ ವಿದ್ಯಾಥಿರ್ಗಳನ್ನು ಗಮನದಲ್ಲಿಟ್ಟುಕೊಂಡು ಸ್ಕಾಲರ್​ ಶಿಪ್​ ಕೂಡ ನೀಡುತ್ತಿದ್ದೇವೆ ಎಂದು ವಿವರಿಸಿದರು.

ಬೇಸಿಗೆ ಶಿಬಿರ : ವರೂರು ಗ್ರಾಮದ ಸುತ್ತ್ತಲಿನ ಗ್ರಾಮಗಳ ಮಕ್ಕಳಿಗಾಗಿ ಮೇ 21 ರಿಂದ 27ರವರೆಗೆ ಉಚಿತ ಬೇಸಿಗೆ ಶಿಬಿರ ಆಯೋಜಿಸಲಾಗಿದೆ. ಶಿಬಿರದಲ್ಲಿ ಮಕ್ಕಳಿಗೆ ವಿವಿಧ ಆಟಗಳು, ಯೋಗ, ಪ್ರಾಣಾಯಾಮ ಸೇರಿದಂತೆ ವಿವಿಧ ಬಗೆಯ ತರಬೇತಿ ನೀಡಲಾಗುವುದು. ನಿತ್ಯ ಊಟ, ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಇದುವರೆಗೆ 5 ಸಾವಿರ ಮಕ್ಕಳು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net