

ಹಿರೇಕೆರೂರ: ಹಾವೇರಿಯಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಮಳೆಯೊಂದಿಗೆ ರಭಸದ ಗಾಳಿಯಿಂದ ಮರ ಬಿದ್ದು ಇಬ್ಬರು ಮೃತಪಟ್ಟ ಘಟನೆ ಹಿರೇಕೆರೂರಿನ ಎಪಿಎಂಸಿ ಬಳಿ ನಡೆದಿದೆ.
ಹಿರೇಕೆರೂರಿನಲ್ಲಿ ಹೆಸ್ಕಾಂ ಗುತ್ತಿಗೆ ನೌಕರರಾಗಿದ್ದ ಮಂಜುನಾಥ (35) ಹನುಮಂತಪ್ಪ (25) ಮೃತಪಟ್ಟವರು.
ಮಧ್ಯಾಹ್ನ ಊಟ ಮುಗಿಸಿ ಬೈಕ್ನಲ್ಲಿ ಮರಳಿ ಹೆಸ್ಕಾಂ ಕಚೇರಿಗೆ ತೆರಳುವಾಗ ಘಟನೆ ನಡೆದಿದೆ.
ಸ್ಥಳಕ್ಕೆ ಹಿರೇಕೆರೂರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಂಜುನಾಥ ಚಿನ್ನಮುಳುಗುಂದ ಗ್ರಾಮದ ನಿವಾಸಿಯಾಗಿದ್ದೆ, ಹನುಮಂತಪ್ಪ ಯತ್ತಿನಹಳ್ಳಿ ಗ್ರಾಮದವರು.