

ವಿಜಯಪುರ: ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಭಾರಿ ಮಳೆ ಆಗಿದೆ. ಬುಧವಾರವೂ ವರುಣನ ಅಬ್ಬರ ಮುಂದುವರಿದಿತ್ತು. ಬೆಳಗ್ಗೆಯಿಂದಲೇ ಬಿಸಿಲಿನ ತಾಪಮಾನ ಹೆಚ್ಚಾಗಿತ್ತು. ಸಂಜೆ ವೇಳೆಗೆ ಮೋಡಕವಿದ ವಾತಾವರಣ ಸೃಷ್ಟಿಗೊಂಡಿತ್ತು. ಸಂಜೆ 6.30ರ ವೇಳೆಗೆ ಏಕಾಏಕಿ ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆ ಆಗಿದೆ. ಮಳೆಯಿಂದಾಗಿ ವಿಜಯಪುರ ನಗರದಲ್ಲಿ ವಾಹನ ಸಂಚಾರ, ಜನಜೀವನ ಅಸ್ತವ್ಯಸ್ತಗೊಂಡಿತ್ತು.
ಇನ್ನೂ ಮಂಗಳವಾರ ರಾತ್ರಿ ಬಸವನ ಬಾಗೇವಾಡಿ 10.9ಮಿ.ಮೀ. ಮಳೆ ಆಗಿದೆ. ಅದರಂತೆ ಮನಗೂಳಿ 9.0, ಆಲಮಟ್ಟಿ 16.4, ಹೂವಿನ ಹಿಪ್ಪರಗಿ 40.2, ಅರೇಶಂಕರ 20.0, ಮಟ್ಟಿಹಾಳ 3.0, ವಿಜಯಪುರ 11.8, ನಾಗಠಾಣ 6.5, ಭೂತನಾಳ 14.4, ಹಿಟ್ನಳ್ಳಿ 3.9, ತಿಕೋಟಾ 5.2, ಮಮದಾಪುರ 9.4, ಕುಮಟಗಿ 4.2, ಕನ್ನೂರ 29.5, ಬಬಲೇಶ್ವರ 10.6, ಇಂಡಿ 43.5, ನಾದ ಬಿ.ಕೆ. 64.2, ಅಗರಖೇಡ 20.1, ಹೋರ್ತಿ 25.8, ಹಲಸಂಗಿ 24.0, ಚಡಚಣ 32.4, ಝಳಕಿ 39.2, ಮುದ್ದೇಬಿಹಾಳ 30.6, ನಾಲತವಾಡ 18.8, ತಾಳಿಕೋಟೆ 23.0, ಢವಳಗಿ 79.2, ಸಿಂದಗಿ 66.2, ಆಲಮೇಲ 23.0, ಸಾಸಾಬಾಳ 12.2, ರಾಮನಹಳ್ಳಿ 30.2, ಕಡ್ಲೆವಾಡ 10.3, ದೇವರಹಿಪ್ಪರಗಿ 13.0, ಕೊಂಡಗೂಳಿ 20.2ಮಿ.ಮೀ. ಮಳೆ ಆಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.