

ಬೇತಮಂಗಲ: ಬೇತಮಂಗಲ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ ಬಿರುಗಾಳಿ ಸಹಿತ ಮಳೆಯಾಗಿದ್ದು, ಬಾಳೆ ತೋಟ ಸೇರಿ ಅನೇಕ ಬೆಳೆಗಳು ಹಾನಿಯಾಗಿದ್ದು, ಕೋಟ್ಯಂತರ ರೂ.ನಷ್ಟ ಸಂಭವಿಸಿದೆ.
ಬೇತಮಂಗಲ ಮತ್ತು ಕ್ಯಾಸಂಬಳ್ಳಿ ಹೋಬಳಿಯ ಹಳ್ಳಿಗಳಲ್ಲಿ ಸಂಜೆ ಪ್ರಾರಂಭವಾದ ಮಳೆ ರಾತ್ರಿ 8ಗಂಟೆವರೆಗೂ ಬಿಟ್ಟು ಬಿಡದೆ ಬಿರುಗಾಳಿ ಸಮೇತ ಬಿದ್ದಿದ್ದರಿಂದ ಮಳೆಯ ರಭಸಕ್ಕೆ ಬೇತಮಂಗಲ ಸೇರಿ ಹಲವು ಕಡೆ ಮರಗಳು ಉರುಳಿ ಬಿದ್ದಿವೆ. ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದ ಪರಿಣಾಮ ವಿದ್ಯುತ್ ಕೈ ಕೊಟ್ಟಿತು.
ಯಮದೂತದಂತೆ ಬಂದ ಬಿರುಗಾಳಿಗೆ ಬಹುತೇಕ ಬಾಳೆ, ಮಾವು ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ಗಣೇಶನಹಬ್ಬ ಮತ್ತು ವರಮಹಾಲಕ್ಷಿ$್ಮ ಹಬ್ಬಕ್ಕೆ ಸಲು ಬರುವ ರೀತಿಯಲ್ಲಿ ಬಾಳೆ ನಾಟಿ ಮಾಡಲಾಗಿತ್ತು. ಇದೀಗ ಹೊಂಬಾಳೆ ಹಂತದಲ್ಲೇ ರೈತನ ಬದುಕು ಮೂರಾಬಟ್ಟೆಯಾಗಿದೆ.
ಬೇತಮಂಗಲ, ದೊಡ್ಡಕಾರಿ, ಕೂಳೂರು, ಗೆನ್ನೆರ ಹಳ್ಳಿ, ದೇವೆರಹಳ್ಳಿ, ವೆಂಗಸಂದ್ರ, ಸುವರ್ಣಹಳ್ಳಿ, ಅನ್ನಸಾಗರ ಸೇರಿ ಸುಮಾರು ರೈತರ ನೂರಾರು ಎಕರೆ ಬೆಳೆ, ಸುಮಾರು ಎರಡು ತಿಂಗಳಿಂದ ಪೋಷಣೆ ಮಾಡುತ್ತಾ ಬಂದಿದ್ದ ವಿವಿಧ ಹೂವು, ಭತ್ತ, ಟೊಮ್ಯಾಟೊ ನೆಲಕ್ಕಿಚ್ಚಿದೆ.
" 2 ಎಕರೆಯಲ್ಲಿ 4&5 ಲಕ್ಷ ಖರ್ಚು ಮಾಡಿ ಬಾಳೆ ಬೆಳೆಯಲಾಗಿತ್ತು. ಶುಕ್ರವಾರ ಸುರಿದ ಬಿರುಗಾಳಿ ಸಹಿತ ಮಳೆಗೆ ನಮ್ಮ ಬೆಳೆ ಹಾನಿಯಾಗಿ ಬೆಳೆ ನಿರೀೆ ಮಣ್ಣುಪಾಲಾಗಿದೆ. ಎಲ್ಲವನ್ನೂ ಸಾಲ ಮಾಡಿ ಬೆಳೆದಿದ್ದು, ಈಗ ನಷ್ಟವಾಗಿದೆ."
> ಚಂದ್ರಪ್ಪ
ರೈತ ಕೂಳೂರು
"ಮಳೆಯಿಂದಾಗಿ ಬೇತಮಂಗಲ ಹೋಬಳಿಯಲ್ಲಿ ಹೆಚ್ಚು ಹಾನಿಯಾಂಗಿದೆ. 50ಎಕರೆ ಬಾಳೆ, 50ಎಕರೆ ಮಾವು, 20ಎಕರೆ ಪಪ್ಪಾಯ, 30ಎಕರೆ ಟೊಮ್ಯಾಟೊ ಸೇರಿ ಇತರೆ ತೋಟಗಾರಿಕೆ ಬೆಳೆಗಳು ಸೇರಿ ಸುಮಾರು 150 ಎಕರೆ ಬೆಳೆಗಳು ನಾಶವಾಗಿದೆ. ಇನ್ನೂ ಮಾಹಿತಿ ಸಂಗ್ರಹವಾಗಬೇಕಿದ್ದು, ರೈತರು ಮಾಹಿತಿ ನೀಡಿದರೆ ಎಲ್ಲವನ್ನೂ ಪರಿಶೀಲಿಸಿ ಮೇಲಾಧಿಕಾರಿಗಳಿಗೆ ವರದಿ ನೀಡುತ್ತೇವೆ. ಸರ್ಕಾರ ಪರಿಹಾರ ಘೋಷಣೆ ಮಾಡಲಿದೆ."
> ವಿಶ್ವನಾಥ್
ತೋಟಗಾರಿಕೆ ಇಲಾಖೆ ಅಧಿಕಾರಿ ಕೆಜಿಎಫ್