ಕರಾಟೆ ಸ್ಪರ್ಧೆಯಲ್ಲಿ ವರುಣಾ ಚಾಂಪಿಯನ್: ಶಿವಮೊಗ್ಗದಲ್ಲಿ ನಡೆದ ಪಂದ್ಯಾವಳಿ

Varuna is the champion in karate competition Mandya
Published on

ಮಂಡ್ಯ: ಶಿವಮೊಗ್ಗದಲ್ಲಿ ಆ.9 ಮತ್ತು 10ರಂದು ನಡೆದ ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯ ಕಠಾ ವಿಭಾಗದಲ್ಲಿ ತಾಲೂಕಿನ ಗೊರವಾಲೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿನಿ ಎಂ.ಎಸ್.ವರುಣಾ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಟೂರ್ನಿಯಲ್ಲಿ 18 ರಾಷ್ಟ್ರದ ಕರಾಟೆ ಪಟುಗಳು ಹಾಗೂ ಭಾರತದ ವಿವಿಧ ರಾಜ್ಯಗಳಿಂದ ಸಾವಿರಕ್ಕೂ ಹೆಚ್ಚು ಕರಾಟೆ ಪಟುಗಳು ಪಾಲ್ಗೊಂಡಿದ್ದರು. ಎಂ.ಎಸ್.ವರುಣಾ ಇತ್ತೀಚಿಗೆ ಮಳವಳ್ಳಿ ಹಾಗೂ ಮಂಡ್ಯದಲ್ಲಿ ನಡೆದಿದ್ದ ರಾಷ್ಟ್ರಮಟ್ಟದ ಮುಕ್ತ ಕರಾಟೆ ವಿಭಾಗದಲ್ಲಿಯೂ ಪ್ರಥಮ ಸ್ಥಾನ ಪಡೆದಿದ್ದರು. ಒಟ್ಟಾರೆ ಈ ವರ್ಷದಲ್ಲಿಯೇ ಸತತ ಮೂರು ಬಹುಮಾನಗಳನ್ನು ಗೆದ್ದ ಹೆಗ್ಗಳಿಕೆ ಹೊಂದಿದ್ದಾರೆ. ಈಕೆಗೆ ನಾರಾಯಣ ಹಾಗೂ ಮಧು ಮಹದೇವ ತರಬೇತಿ ನೀಡುತ್ತಿದ್ದಾರೆ.

ಸಾಧನೆ ಮಾಡಿದ ವಿದ್ಯಾರ್ಥಿನಿಯನ್ನು ಮುಖ್ಯಶಿಕ್ಷಕಿ ಯಮುನಾ, ದೈಹಿಕ ಶಿಕ್ಷಣ ಶಿಕ್ಷಕ ಕೆ.ಎಸ್.ರಾಮ ಸಂಜೀವಯ್ಯ, ಮುತ್ಯಾಲಪ್ಪ, ಹನುಮಂತ ಪೂಜಾರಿ, ಜೆಸಿಂತಾ ರೋಜಲಿನ್, ಪ್ಲಾಸ್ಟಿಕ್ ವಿರೋಧಿ ಪರಿಸರಮಿತ್ರ ಜಯಶಂಕರ್ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net