ಜ.21ಕ್ಕೆ ವರ್ತೂರು ಸಂಕ್ರಾಂತಿ ಉತ್ಸವ; ಮುಖ್ಯ ಅತಿಥಿಯಾಗಿ ಡಾಲಿ ಧನಂಜಯ ಆಗಮನ

sank
Published on

ಬೆಂಗಳೂರು: ವರ್ತೂರು ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಪ್ರತಿವರ್ಷ ಆಯೋಜಿಸುವಂತೆ 14ನೇ ವರ್ಷದ ಸಂಕ್ರಾಂತಿ ಉತ್ಸವ 2025ನ್ನು ಮಂಗಳವಾರ (ಜ.21) ಹಮ್ಮಿಕೊಂಡಿದೆ.

ಪ್ರತಿವರ್ಷದಂತೆ ರಾಸುಗಳ ಮೆರವಣಿಗೆ ಮತ್ತು ಪ್ರದರ್ಶನ, ಕಿಚ್ಚು ಹಾಯಿಸುವುದು, ವಿವಿಧ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವರ್ತೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಅಂದು ಸಂಜೆ 4ರಿಂದ ಆರಂಭವಾಗುವ ವಿವಿಧ ಕಾರ್ಯಕ್ರಮಗಳು ರಾತ್ರಿವರೆಗೆ ನಡೆಯಲಿವೆ ಎಂದು ಸಂಘದ ಅಧ್ಯಕ್ಷ ಮಹೇಂದ್ರ ಮೋದಿ ತಿಳಿಸಿದ್ದಾರೆ.

ಶಾಸಕಿ ಮಂಜಳಾ ಲಿಂಬಾವಳಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಾಜಿ ಸಚಿವ ಅರವಿಂದ ಲಿಂಬಾವಳಿ ಅಧ್ಯಕ್ಷತೆ ವಹಿಸಲಿದ್ದಾರೆ. ನಟ ಡಾಲಿ ಧನಂಜಯ್ ಮತ್ತಿತರರು ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಗಾಯಕಿ ಅನನ್ಯ ಭಟ್ ತಂಡದವರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ. ಹಾಗೂ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ವಿವಿಧ ನೃತ್ಯ, ಭರತನಾಟ್ಯ, ನಗೆಹಬ್ಬ, ಸಾಧಕರಿಗೆ ವರ್ತೂರುಶ್ರೀ ಪ್ರಶಸ್ತಿ ಪ್ರದಾನ ಸೇರಿದಂತೆ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವರ್ತೂರು ನಿವಾಸಿಗಳು ಕಾರ್ಯಕ್ರಮಕ್ಕೆ ಆಗಮಿಸುವಂತೆ ಮಹೇಂದ್ರ ಮೋದಿ ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ ದೂ: 9845230241 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net