ವ್ಯಾಪಾರ, ವಹಿವಾಟು ಪ್ರಾಮಾಣಿಕವಾಗಿರಲಿ

29 SARAG 4
filter: 0; fileterIntensity: 0.000000; filterMask: 0; captureOrientation: 0; hdrForward: 6; shaking: 0.001162; highlight: 1; algolist: 0; multi-frame: 1; brp_mask: 8; brp_del_th: 0.0014,0.0000; brp_del_sen: 0.1500,0.0000; delta:null; module: photo;hw-remosaic: false;touch: (-1.0, -1.0);sceneMode: 7864320;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: 0;weatherinfo: null;temperature: 41;
Published on

ಸರಗೂರು : ವ್ಯಾಪಾರ, ವಹಿವಾಟು ಪ್ರಾಮಾಣಿಕವಾಗಿರಲಿ ಎಂದು ವಿವೇಕಾನಂದ ಸ್ಮಾರಕ ಯೂತ್ ಮೂಮೆಂಟ್ ಆಸ್ಪತ್ರೆ ಸಂಸ್ಥಾಪಕ ಡಾ .ಆರ್. ಬಾಲಸುಬ್ರಮಣ್ಯ ಹೇಳಿದರು. ತಾಲೂಕಿನ ಭೀಮನ ಕೊಳ್ಳಿ ದೇವಸ್ಥಾನದ ಆವರಣದಲ್ಲಿ ಭಾನುವಾರ ವರ್ತಕರ ಮಂಡಳಿ ಪದಾಧಿಕಾರಿಗಳು ಪದಗ್ರಹಣ ಹಾಗೂ ಹಿರಿಯ ವರ್ತಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗೂಡಂಗಡಿ ಯಿಂದ ಹಿಡಿದು ದೊಡ್ಡ ವಾಣಿಜ್ಯ ಮಳಿಗೆ ತನಕ ವಹಿವಾಟು ನಡೆಸುವ ಎಲ್ಲರೂ ವರ್ತಕರೇ ಆಗಿದ್ದಾರೆ. ವರ್ತಕರಲ್ಲಿ ಸ್ವರ್ಧೆ ಇರಲಿ. ಆದರೆ ಅದು ದುರಾಸೆಯಾಗಿ, ಇತರರೊಂದಿಗೆ ವೈಮನಸ್ಯ ಮಾಡುವ ದಂಧೆ ಆಗಬಾರದು ಎಂದರು. ಪ್ರಾಮಾಣಿಕವಾಗಿ ವ್ಯಾಪಾರ ಮಾಡಿದಾಗ ಅದರಲ್ಲಿ ಲಾಭವೂ ಇದೆ. ಯಶಸ್ಸೂ ದೊರಕುತ್ತದೆ. ಹಾಗಾಗಿ ಸ್ವಯಂ ನೀತಿಸಂಹಿತೆ ಅಳವಡಿಸಿಕೊಳ್ಳಬೇಕು ಎಂದು ಅವರು ಉದ್ಯಮಿಗಳಿಗೆ ಸಲಹೆ ನೀಡಿದರು. ಇಂತಹ ಸಂಘಟನೆಗಳಿಂದ ವರ್ತಕರಿಗೂ ಒಂದು ರೀತಿ ಬಲ ಬರುತ್ತದೆ. ಸರಗೂರು ವರ್ತಕರ ಮಂಡಳಿ ಸಮಾಜಕ್ಕೆ ಇನ್ನಷ್ಟು ಉತ್ತಮ ಸೇವೆ ಸಲ್ಲಿಸಲಿ ಎಂದವರು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

ಪಟ್ಟಣದ ಅಭಿವೃದ್ಧಿಗೆ ಅನುದಾನ ಬೇಕು: ಅಧ್ಯಕ್ಷತೆ ವಹಿಸಿದ್ದ ವರ್ತಕರ ಮಂಡಳಿ ಮಾಜಿ ಅಧ್ಯಕ್ಷ ಎಸ್.ಎಂ. ಶ್ರೀನಿವಾಸ ಮಾತನಾಡಿ, ಸುಮಾರು ವರ್ಷಗಳಿಂದ ವರ್ತಕರ ಮಂಡಳಿ ಪಟ್ಟಣದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಿಕೊಂಡು ಬರುತ್ತಿದೆ ಎಂದರು. ಪಟ್ಟಣ ಅಭಿವೃದ್ಧಿಗೆ ಶಾಸಕರು ಹೆಚ್ಚು ಅನುದಾನವನ್ನು ಸರ್ಕಾರದಿಂದ ತರಬೇಕು ಎಂದರು.

ಸಂಪತ್ತು ಇರುವಾಗ ದಾನ ಮಾಡಿ: ಸ್ನೇಹಶ್ರೀ ಸಮಾಜ ಅಧ್ಯಕ್ಷೆ ಸುಧಾ ಮಾತನಾಡಿ, ಸಂಪತ್ತು ಇರುವಾಗ ದಾನ ಮಾಡಬೇಕು. ಅಗ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದರು. ವರ್ತಕರ ಮಂಡಳಿ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು. ಇದೇ ಸಂದರ್ಭ ಅತಿಥಿಗಳು ಮಂಡಳಿಯ ನೂತನ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು.

ಪಪಂ ಮುಖ್ಯಾಧಿಕಾರಿ ಸಂತೋಷ ಕುಮಾರ್, ಸಿನಿಮಾ ನಿರ್ದೇಶಕ ಕಾತೀಕ್, ಸರಗೂರು.ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆಂಡಗಣ್ಣಸ್ವಾಮಿ ಮಾತನಾಡಿದರು. ಮಂಡಳಿಯ ಹಿರಿಯರಿಗೆ ಹಾಗೂ ಎಸ್‌ಎಸ್‌ಎಲ್‌ಸಿ , ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದವರಿಗೆ ಸನ್ಮಾನಿಸಲಾಯಿತು. ನೂತನ ಅಧ್ಯಕ್ಷ ಎಸ್.ಪಿ. ಪ್ರತಾಪ್, ಉಪಾಧ್ಯಕ್ಷ ಮೋಹನ ಕುಮಾರ್, ಕಾರ್ಯದರ್ಶಿ ವೆಂಕಟೇಶ್, ಖಜಾಂಚಿ ಡಗ್ಲಾ ರಾಮ, ಸಹ ಕಾರ್ಯದರ್ಶಿ ಹುಕ್ಕುಂಸಿಂಗ್, ಪಪಂ ಉಪಾಧ್ಯಕ್ಷ ಶಿವಕುಮಾರ, ಸದಸ್ಯ ಶ್ರೀನಿವಾಸ, ಮಹದೇವಶ್ವರ ಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ಎಂಪಿಎಸ್ ಮೂರ್ತಿ, ಕಾರ್ಯದರ್ಶಿ ಜಗದೀಶ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net