ವತ್ತಿನಕಟ್ಟೆ ದೇವಸ್ಥಾನದಲ್ಲಿ ವಾರ್ಷಿಕ ಹಾಲುಹಬ್ಬ

vattinakatte
Published on

ಬೈಂದೂರು: ಕಾರಣೀಕ ಕ್ಷೇತ್ರ ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ಮಂಗಳವಾರ ಬೆಳಗ್ಗೆ ಮಕರ ಸಂಕ್ರಮಣ ಪರ್ವಕಾಲದ ವಾರ್ಷಿಕ ಹಾಲುಹಬ್ಬಕ್ಕೆ ದೇವಳ ಪ್ರಧಾನ ಅರ್ಚಕ ಬಿ.ಕೃಷ್ಣಮೂರ್ತಿ ನಾವಡ ಚಾಲನೆ ನೀಡಿದರು.

ರಾತ್ರಿ ವಿಶೇಷ ಗೆಂಡಸೇವೆ, 25ಕ್ಕೂ ಹೆಚ್ಚು ಪಾತ್ರಿಗಳು ದರ್ಶನ ಸೇವೆ ನಡೆಸಿದರು. ನೂರಾರು ಭಕ್ತರು ಕೆಂಡ ತುಳಿದು ಹರಕೆ ಸಲ್ಲಿಸಿದರು. ನಂತರ ಗೋಳಿಗರಡಿ ಮೇಳದವರಿಂದ ಯಕ್ಷಗಾನ ಬಯಲಾಟ ನಡೆಯಿತು.

ಬುಧವಾರ ಬೆಳಗ್ಗೆ ದೇವರಿಗೆ ವಿಶೇಷ ಪೂಜೆ, ಚಂಡಿಕಾಹೋಮ ಹರಕೆ ಕಾಣಿಕೆ ಸಮರ್ಪಣೆ, ಮಧ್ಯಾಹ್ನ 12ರಿಂದ ತುಲಾಭಾರ ಸೇವೆ, ದರ್ಶನ ಸೇವೆ ನಂತರ ಅನ್ನಸಂತರ್ಪಣೆ ನಡೆಯಿತು. ಎರಡು ದಿನಗಳ ಉತ್ಸವದಲ್ಲಿ ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಿಂದ ಸಾವಿರಾರು ಭಕ್ತರು ಭಾಗವಹಿಸಿದ್ದರು. ಶ್ರೀ ಮಹಾಸತಿ ಅಮ್ಮನವರ ಸೇವಾ ಸಮಿತಿ ಅಧ್ಯಕ್ಷ ನಾಕಟ್ಟೆ ನಾಗರಾಜ ಶೆಟ್ಟಿ, ಕಾರ್ಯದರ್ಶಿ ಶಿವರಾಮ ಪೂಜಾರಿ ಯಡ್ತರೆ, ಬಂಕೇಶ್ವರ ನಾಗರಾಜ ಗಾಣಿಗ, ಸದಸ್ಯರಾದ ಶಂಕರ ಮೊಗವೀರ, ಸತ್ಯಪ್ರಸನ್ನ, ಅಣ್ಣಪ್ಪ ಪೂಜಾರಿ (ಪಾತ್ರಿ), ಮಂಜುನಾಥ ಬಿಲ್ಲವ, ರವೀಂದ್ರ ಶ್ಯಾನುಭಾಗ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net