ಸುಂಟಿಕೊಪ್ಪದಲ್ಲಿ ವಾರ್ಷಿಕ ಬೆಳೆ ಹಬ್ಬ

13sunti03
Published on

ಸುಂಟಿಕೊಪ್ಪ : ಚರ್ಚ್ ಆಫ್ ಸೌತ್ ಇಂಡಿಯಾದ ದಕ್ಷಿಣ ಪ್ರಾಂತ್ಯದಿಂದ ಸುಂಟಿಕೊಪ್ಪದಲ್ಲಿರುವ ಇಮ್ಯಾನ್‌ವೇಲ್ ದೇವಾಲಯದಲ್ಲಿ ವಾರ್ಷಿಕ ಬೆಳೆ ಹಬ್ಬ ಭಾನುವಾರ ಶ್ರದ್ಧಾ ಭಕ್ತಿಗಳಿಂದ ನೆರವೇರಿತು. ದೇವಾಲಯ ಹಾಗೂ ಆವರಣವನ್ನು ಕಬ್ಬು, ಭತ್ತದ ಪೈರು, ವಿವಿಧ ಹೂವು ಮತ್ತು ಫಲ ವಸ್ತುಗಳಿಂದ ಸಿಂಗರಿಸಿದ್ದು ಗಮನ ಸೆಳೆಯಿತು.
ರೆವರೆಂಡ್ ಫಾದರ್ ಜೈಸನ್ ಗೌಡರ ಮಾತನಾಡಿ, ದೇವಾಲಯದ ವಾರ್ಷಿಕ ವಿಧಿಯಲ್ಲಿ ಬೆಳೆ ಹಬ್ಬವು ಪ್ರಮುಖವಾಗಿದೆ. ಬೈಬಲ್ ಪ್ರಕಾರ ಭಕ್ತರು ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಮೊದಲ ಕಾಣಿಕೆಯಾಗಿ ದೇವರಿಗೆ ಸಮರ್ಪಿಸುವುದು ಒಂದು ಪದ್ಧತಿಯಾಗಿದೆ ಎಂದರು. ದೇವರು ನೀಡಿದ ಬೆಳೆ ಮತ್ತು ಫಲಗಳನ್ನು ದೇವರಿಗೇ ಪುನಾರವರ್ತಿ ಕಾಣಿಕೆಯಾಗಿ ಸರ್ಮಪಿಸುವುದು ಧನ್ಯತೆಯನ್ನು ತಂದುಕೊಡುತ್ತದೆ. ನಮ್ಮ ಜೀವನವನ್ನು ಆನಂದದ ಮಾರ್ಗದಲ್ಲಿ ಮುನ್ನಡೆಸುತ್ತದೆ ಎಂದು ಅವರು ಅಭಿಪ್ರಾಯಿಸಿದರು.
ಸುಂಟಿಕೊಪ್ಪ ಸಭಾಪಾಲಕ ಮಧುಕಿರಣ್ , ಫಾದರ್ ಡೆನ್ನಿಯಲ್ ಕೌಂಡಿನ್ಯ, ಜೋನಿಯಲ್ ಸುಹಾಸ್ ಇತರರು ಇದ್ದರು. ಪ್ರಾರ್ಥನೆ, ಪೂಜೆ, ಸಾಮೂಹಿಕ ಭೋಜನ ನಡೆಯಿತು. ಸಂಜೆಯ ಆಟೋಟ ಸ್ಪರ್ಧೆ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮ ರಂಜನೆ ನೀಡಿದವು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸಭಾಪಾಲನ ಸಮಿತಿ ಸದಸ್ಯರು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net