ದಸರಾ ಪುಸ್ತಕ ಮೇಳದಲ್ಲಿ ವಿವಿಧ ಕೃತಿಗಳ ಬಿಡುಗಡೆ

4
Published on

ಮೈಸೂರು: ದಸರಾ ಪುಸ್ತಕ ಮೇಳದಲ್ಲಿ ಸೋಮವಾರ ವಿವಿಧ ಲೇಖಕರ ಒಟ್ಟು ನಾಲ್ಕು ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.

ಮೈಸೂರು ದಸರಾ ಮಹೋತ್ಸವ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರಯಿಂದ ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಆಯೋಜಿಸಲಾಗಿರುವ ಕನ್ನಡ ಪುಸ್ತಕ ರಿಯಾಯಿತಿ ಮಾರಾಟ ಮೇಳದಲ್ಲಿ ಕೃತಿಗಳನ್ನು ಲೇಖಕಿ ಡಾ.ಎಂ.ಎಸ್. ಅನಿತಾ ಮಂಗಲ ಅನಾವರಣಗೊಳಿಸಿದರು.

ಲೇಖಕರಾದ ಎಸ್. ಸುಂದರ್‌ಕುಮಾರ್ ಅವರ ಜನರೊಡಲ ಜಂಗಮ, ವಸು ವತ್ಸಲೇ ಅವರ ಮನಸೇ ಥ್ಯಾಂಕ್ಯೂ, ಆರ್. ಸದಾಶಿವಯ್ಯ ಚರಗನಹಳ್ಳಿ ಅವರ ಕಾವ್ಯಧಾರೆ, ದಿವಾಕರ ಆಜಾದ್ ಅವರ ವಿಕರ್ಣ ಕೃತಿಗಳು ಬಿಡುಗಡೆಗೊಂಡವು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಅಧ್ಯಕ್ಷತೆ ವಹಿಸಿದ್ದರು. ಕೃತಿಯ ಲೇಖಕರೊಂದಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್, ಉಪಸಮಿತಿ ಸದಸ್ಯ ರಾಜಶೇಖರ ಕದಂಬ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net