ವಿವಿಧ ಕಾಮಗಾರಿಗಳಿಗೆ ಕೇಂದ್ರ ಸಚಿವ ನಿತೀನ್ ಗಡ್ಕರಿ ಶಿಲಾನ್ಯಾಸ ; ವಿಡಿಯೋ ಕಾನ್ಪರೆನ್ಸ್ ವೀಕ್ಷಿಸಿದ ಶಾಸಕ ವೆಂಕಟರಾವ ನಾಡಗೌಡ

191220 Sindhanuru MLA Video Conference Gadkari
ಭಾರತ ಸರ್ಕಾರದ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತೀನ್ ಗಡ್ಕರಿ ಶನಿವಾರ ವಿಡಿಯೋ ಕಾನ್ಪರೆನ್ಸ್ ಮೂಲಕ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದರು.
Published on

ಸಿಂಧನೂರು: ಭಾರತ ಸರ್ಕಾರದ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತೀನ್ ಗಡ್ಕರಿ ವಿಡಿಯೋ ಕಾನ್ಪರೆನ್ಸ್ ಮೂಲಕ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಶಿಲಾನ್ಯಾಸ ನೆರವೇರಿಸಿದರು.

ವಿಡಿಯೋ ಕಾನ್ಪರೆನ್ಸ್‌ನಲ್ಲಿ ಭಾಗವಹಿಸಿದ್ದ ಶಾಸಕ ವೆಂಕಟರಾವ ನಾಡಗೌಡ, ಸುದ್ದಿಗಾರರೊಂದಿಗೆ ಮಾತನಾಡಿ, 21.13 ಕೋಟಿ ರೂ. ವೆಚ್ಚದಲ್ಲಿ ಸಿಂಧನೂರು ನಗರದ ಸೇತುವೆ 0.4 ಕಿಮೀ ಉದ್ದ ಅಗಲೀಕರಣ ಕಾಮಗಾರಿಗೆ ಕೇಂದ್ರ ಸಚಿವರು ಭೂಮಿ ಪೂಜೆ ನೆರವೇರಿಸಿದ್ದಾರೆ. ತಾಲೂಕಿನ ದಢೇಸುಗೂರು ಗ್ರಾಮದ ಬ್ರಿಜ್ ಹಳೆಯದಾಗಿದ್ದು, ಇದರ ನಿರ್ಮಾಣ ಕುರಿತು ಕೇಂದ್ರದ ಗಮನಕ್ಕೆ ತಂದು ಪ್ರಸ್ತಾವನೆ ಸಲ್ಲಿಸಲಾಯಿತು. ಜತೆಗೆ ಸಿಂಧನೂರು-ಮಸ್ಕಿ ಮಾರ್ಗ ಮಧ್ಯದಲ್ಲಿರುವ 6 ಬ್ರಿಜ್‌ಗಳನ್ನು ನವೀಕರಣಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರು.

ಲೋಕೋಪಯೋಗಿ ಇಲಾಖೆ ಎಇಇ ವಿ.ಎಸ್.ಪಾಟೀಲ್, ಜೆಡಿಎಸ್ ಮುಖಂಡರಾದ ಧರ್ಮನಗೌಡ ಮಲ್ಕಾಪುರ, ಸೈಯ್ಯದ್ ಆಸೀಫ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net