ತರಹೇವಾರಿ ಆಭರಣ ಸುಲ್ತಾನ್‌ನಲ್ಲಿ ಲಭ್ಯ

h1-Sultan 1
Published on

ಹುಬ್ಬಳ್ಳಿ: ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್‌ನಲ್ಲಿ ತರಹೇವಾರಿ ಆಭರಣಗಳು ಲಭ್ಯ ಇವೆ. ರಿಯಾಯಿತಿ ದರದಲ್ಲಿ ಎಲ್ಲ ರೀತಿಯ ಆಭರಣಗಳು ಸಿಗುತ್ತಿರುವುದು ಹುಬ್ಬಳ್ಳಿ ಜನತೆ ಭಾಗ್ಯ ಎಂದು ಕನ್ನಡ ಚಿತ್ರರಂಗದ ನಾಯಕ ನಟಿ ರಚಿತಾರಾಮ್ ಅಭಿಪ್ರಾಯಪಟ್ಟರು.

ಇಲ್ಲಿಯ ಕೊಪ್ಪಿಕರ ರಸ್ತೆಯ ವಿಕ್ಟೋರಿಯಾ ರಸ್ತೆಯ ಶ್ರೀ ಪದ್ಮಾ ಮಾಲ್‌ನಲ್ಲಿರುವ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್‌ನ 14ನೇ ಮಳಿಗೆ ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಈಗ ಶುಭ ಕಾರ್ಯಕ್ರಮಗಳು ಆರಂಭವಾಗಿವೆ. ಮುಂದೆಯೂ ಆರಂಭವಾಗಲಿವೆ. ಸುಲ್ತಾನ್ ಆಭರಣ ಅಂಗಡಿಯಲ್ಲಿಯೇ ಖರೀದಿ ಮಾಡಿ ಖುಷಿಪಡಿ ಎಂದರಲ್ಲದೆ, ಹುಬ್ಬಳ್ಳಿಯಲ್ಲಿ ಕಾರ್ಯಕ್ರಮ ಇದ್ದಾಗ ನಾನು ನಿಮಗೆ ಸಿಗುತ್ತಿರುತ್ತೇನೆ. ನಿಮ್ಮ ಪ್ರೀತಿ, ಅಭಿಮಾನ, ಆಶೀರ್ವಾದ ನನ್ನ ಮೇಲಿರಲಿ ಎಂದು ವಿನಂತಿಸಿದರು.

ಶಾಸಕ ಪ್ರಸಾದ ಅಬ್ಬಯ್ಯ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಕಾಂಗ್ರೆಸ್ ಮಹಾನಗರ ಅಧ್ಯಕ್ಷ ಅಲ್ತಾಫ್‌ಹುಸೇನ್ ಹಳ್ಳೂರ, ಸುಲ್ತಾನ್ ಆಭರಣ ಅಂಗಡಿ ವ್ಯವಸ್ಥಾಪಕ ನಿರ್ದೇಶಕ ಡಾ. ಅಬ್ದುಲ್ ರಹೂಫ್, ಕಾರ್ಯನಿರ್ವಾಹಕ ನಿರ್ದೇಶಕ ಅಬ್ದುಲ್ ರಹೀಂ, ನಿರ್ದೇಶಕ ಅಬ್ದುಲ್ ರಿಯಾಜ್, ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net