

ಸಿದ್ದಾಪುರ: ತಾಲೂಕಿನ ಚಪ್ಪರಮನೆ ಗ್ರಾಮದ ಹಳ್ಳಿಬೈಲ್ನಲ್ಲಿ ಅಶ್ವತ್ಥ ಉಪನಯನ ಹಾಗೂ ನಾಗಪ್ರತಿಷ್ಠಾಪನಾ ಕಾರ್ಯಕ್ರಮ ಫೆ. 18 ಹಾಗೂ 19ರಂದು ವಿವಿಧ ಧಾರ್ವಿುಕ ಕಾರ್ಯಕ್ರಮದೊಂದಿಗೆ ಜರುಗಲಿದೆ.
ಫೆ. 18ರಂದು ಪಂಚಗವ್ಯ ಹೋಮ, ಪ್ರಾಯಶ್ಚಿತ ಕರ್ಮ, ದೇವನಾಂದಿ, ಪ್ರತಿಷ್ಠಾ ಹೋಮ ಸಂಜೆ ಗಣಪತಿ ಪೂಜೆ, ಪುಣ್ಯಾಹ, ಪ್ರಧಾನ ಸಂಕಲ್ಪ, ದೇವತಾ ಪ್ರಾರ್ಥನೆ, ಕೃಚ್ವಾಚರಣೆ, ಋತ್ವಿಕ್ ವರ್ಣನೆ, ಗೋಪೂಜೆ, ರಾಕ್ಷೋಘ್ನ ವಾಸ್ತುಹೋಮ, ನಾಗ ಅಧಿವಾಸ, ಮಹಾಮಂಗಳಾರತಿ, ರಜೋಪಚಾರ, ಪ್ರಸಾದ ವಿತರಣೆ ನಡೆಯಲಿದೆ. ಫೆ. 19ರಂದು ಬೆಳಗ್ಗೆ ವಿಷ್ಣುಹೋಮ, ಗಣಪತ್ಯ ಹೋಮ, ಲೋಕಪಾಲಹೋಮ, ಸಂಸ್ಕಾರ ಹೋಮ, ನವಗ್ರಹ ಶಾಂತಿ ಅಶ್ವತ್ಥ ವೃಕ್ಷಕ್ಕೆ ಉಪವೀತಧಾರಣ, ತುಳಸಿಗಿಡ ಸ್ವಾಗತ, ಅಶ್ವತ್ಥಕ್ಕೆ ತುಳಸಿ ವಿವಾಹ, ಮಹಾಕುಂಭಾಭಿಷೇಕ, ಮಹಾಮಂಗಳಾರತಿ, ಸಾರ್ವಜನಿಕ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ.
ರಾತ್ರಿ 9.30ರಿಂದ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ ಕ್ಷೇತ್ರ ಮೆಕ್ಕೆಕಟ್ಟು ಹಾಗೂ ಅತಿಥಿ ಕಲಾವಿದರಿಂದ ರಾಮನಿರ್ಯಾಣ, ಮಾಗಧವಧೆ, ಬಬ್ರುವಾಹನ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.