ಬಂಕಾಪುರದಲ್ಲಿ ವಿವಿಧ ಧಾರ್ವಿುಕ ಕಾರ್ಯಕ್ರಮ

BNK VIVIDHA
Published on

ಬಂಕಾಪುರ: ರೇಣುಕಾಚಾರ್ಯ ಜಯಂತಿ ನಿಮಿತ್ತ ಬಂಕಾಪುರ-ಮಣ್ಣೂರ ಸರಹದ್ದಿನಲ್ಲಿರುವ ಶ್ರೀ ಆದಿ ಜಗದ್ಗುರು ಶ್ರೀ ರೇವಣಶಿದ್ಧೇಶ್ವರ ದೇವಸ್ಥಾನದಲ್ಲಿ ಮಾ. 12ರಂದು ವಿವಿಧ ಧಾರ್ವಿುಕ ಕಾರ್ಯಕ್ರಮಗಳು ಜರುಗಲಿವೆ.

ಬೆಳಗ್ಗೆ 6 ಗಂಟೆಗೆ ಕೆಂಡದಮಠದ ಶ್ರೀ ಶಿವಪುತ್ರಯ್ಯ ಸ್ವಾಮಿಗಳು, ಬಸಯ್ಯ ಸ್ವಾಮಿಗಳು ಹಾಗೂ ಶಿದ್ದಯ್ಯ ಸ್ವಾಮಿಗಳು ಅವರಿಂದ ದೇವರಿಗೆ ರುದ್ರಾಭಿಷೇಕ ನಡೆಯಲಿದೆ. ಬಳಿಕ ಹೊನ್ನಾಪುರ ಕರಿಶಿದ್ಧೇಶ್ವರ, ಮಣ್ಣೂರ ಉಡಚಮ್ಮದೇವಿಯ ಪಲ್ಲಕ್ಕಿ ಉತ್ಸವ, ಆಲಗ ಹಾಯುವುದು ಮತ್ತು ಹಾಲಿನ ಕೊಡಗಳ ಮೆರವಣಿಗೆ ಜರುಗಲಿವೆ.

ನಂತರ ಮಹಾಪ್ರಸಾದ ಜರುಗಲಿದೆ. ಸಂಜೆ ಧರ್ಮಸಭೆ ಕಾರ್ಯಕ್ರಮ ಮತ್ತು ರಾತ್ರಿ ಡೊಳ್ಳಿನ ಪದಗಳು ಹಾಗೂ ಜಾಗರಣೆ ಕಾರ್ಯಕ್ರಮ ನಡೆಯಲಿದೆ ಎಂದು ದೇವಸ್ಥಾನ ಜಾತ್ರಾ ಸಮಿತಿ ಸದಸ್ಯರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net