

ವಿಜಯಪುರ: ತಾಲೂಕಿನ ಐನಾಪೂರ ಎಲ್ಟಿ ಗ್ರಾಮದ ನಾಯಿಕ ನಗರದಲ್ಲಿ ನೂತನವಾಗಿ ನಿರ್ಮಿಸಿದಿ ವಿಠಲ ರುಕ್ಮಿಣಿ ದೇವರ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ಜು. 31 ರಿಂದ ಆ. 1 ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಜು. 31 ರಂದು ಬೆಳಗ್ಗೆ 10 ಗಂಟೆಗೆ 501 ಸುಮಂಗಲೆಯರಿಂದ ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಐನಾಪೂರ ತಾಂಡಾವರೆಗೆ ಕುಂಭಮೇಳ ನಡೆಯಲಿದೆ. ಗ್ರಾಪಂ ಮಾಜಿ ಅಧ್ಯಕ್ಷೆ ಜಯಶ್ರೀ ಜಾಧವ, ಮಮತಾಜ್ ಗಚ್ಚಿಮಹಲ್ ಹಾಗೂ ಗ್ರಾಪಂ ಸದಸ್ಯೆ ಭಾರತಿ ನಾಯಿಕ ಕುಂಭಮೇಳಕ್ಕೆ ಚಾಲನೆ ನೀಡುವರು.
ಆ. 1 ರಂದು ಸಂಜೆ 4 ಗಂಟೆಗೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ದೇವಸ್ಥಾನ ಉದ್ಘಾಟಿಸುವರು.
ನಾಗಠಾಣ ಕ್ಷೇತ್ರದ ವಿಠ್ಠಲ ಕಟಕಧೋಂಡ ಅಧ್ಯಕ್ಷತೆ ವಹಿಸುವರು. ಗ್ರಾಪಂ ಅಧ್ಯಕ್ಷ ಮಹಾದೇವ ರಾಠೋಡ ಉಪಸ್ಥಿತರಿರುವರು. ಐನಾಪೂರ ತಾಂಡಾದ ರೂಪಸಿಂಗ ಮಹಾರಾಜರು, ಸೋಮದೇವರಹಟ್ಟಿ ತಾಂಡಾದ ಜಗನು ಮಹಾರಾಜರು, ಕೆಸರಟ್ಟಿ ಶಂಕರಲಿಂಗ ಗುರುಪೀಠದ ಸೋಮಲಿಂಗ ಸ್ವಾಮೀಜಿ, ಬುರಣಾಪೂರದ ಸಿದ್ದಾರೂಢ ಮಠದ ಯೋಗೇಶ್ವರಿ ಮಾತಾ ಹಾಗೂ ತೊರವಿ ಎಲ್ಟಿಯ ಗೋಪಾಲ ಮಹಾರಾಜ ಸಾನ್ನಿಧ್ಯ ವಹಿಸುವರು.
ಮಾಜಿ ಶಾಸಕರಾದ ಮನೋಹರ ಐನಾಪೂರ, ದೇವಾನಂದ ಚವಾಣ ಸಾಂಸತಿಕ ಉತ್ಸವಕ್ಕೆ ಚಾಲನೆ ನೀಡುವರು. ಬಿಜೆಪಿ ಎಸ್ಸಿ ಮೋರ್ಚಾ ನಗರ ಮಂಡಲ ಅಧ್ಯಕ್ಷ ಪ್ರಕಾಶ ಚವಾಣ, ಜಿಪಂ ಮಾಜಿ ಅಧ್ಯಕ್ಷ ಅರ್ಜುನ ರಾಠೋಡ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಹೀಂದ್ರಕುಮಾರ ನಾಯಿಕ ಜ್ಯೋತಿ ಬೆಳಗಿಸುವರು ಎಂದು ಪ್ರಕಟಣೆ ತಿಳಿಸಿದೆ.