ಇಂದಿನಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ

Siddheshwar organization expresses anger against Mushrif
Shivasharane Hemaraddi Mallamma Jayanti
Published on

ವಿಜಯಪುರ: ತಿಕೋಟಾ ತಾಲೂಕಿನ ತಾಜಪೂರ (ಎಚ್​) ಗ್ರಾಮದ ಜೈ ಹನುಮಾನ ಜಾತ್ರಾ ಮಹೋತ್ಸವ ನಿಮಿತ್ತ ಏ. 5 ರಂದ 12 ರವರೆಗೆ ವಿವಿಧ ಧಾರ್ಮಿಕ, ಸಾಂಸತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ನಿತ್ಯ ಸಂಜೆ 6.30ರಿಂದ 7.30ರ ವರೆಗೆ ಸ್ಥಳಿಯ ಭಜನಾ ಮಂಡಳಿಯಿಂದ ವಿಶೇಷ ಪೂಜೆ ಮತ್ತು ಹೂವಿನ ಅಲಂಕಾರ ಮತ್ತು ಸಂಜೆ 7.30 ರಿಂದ 8.30ರ ವರೆಗೆ ಗುರುದೇವಾಶ್ರಮದ ಶಿವಯೋಗೀಶ್ವರ ಸ್ವಾಮೀಜಿಗಳಿಂದ ಆಧ್ಯಾತ್ಮಿಕ ಪ್ರವಚನ ನಡೆಯಲಿದೆ.

ಏ.8 ರಂದು ಬೆಳಗ್ಗೆ 7ಕ್ಕೆ ತೇರಿನ ಕಲಶಾರೋಹಣವನ್ನು ಗೋಕಾಕ ಮಮದಾಪೂರ ಮಠದ ಮೌನ ಮಲ್ಲಿಕಾರ್ಜುನ ಸ್ವಾಮೀಜಿ, ಮಾರುತಿ ಮೂರ್ತಿಗೆ ಅಭಿಷೇಕ ಹಾಗೂ ಕಲಶಾರೋಹಣವನ್ನು ತಾಜಪುರ ಹಿರೇಮಠದ ಶಂಕ್ರಯ್ಯ ಶಾಸಿ ಹಾಗೂ ನಂದಿಕೋಲ ಪೂಜೆ ಮತ್ತು ಹೋಮ ಹವನವನ್ನು ಹೂವಿನ ಹಿಪ್ಪರಗಿಯ ಶ್ರೀಕಾಂತ ಶಾಸಿಗಳು ನೆರವೇರಿಸುವರು. ಜ್ಞಾನ ಯೋಗಾಶ್ರಮದ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ಏ.10 ರಂದು ರಾತ್ರಿ 10.30ಕ್ಕೆ ಜ್ಞಾನಯೋಗಿ ಎಂಬ ಭಕ್ತಿ ಪ್ರಧಾನ ನಾಟಕ ಪ್ರದರ್ಶನ ನಡೆಯಲಿದೆ. ಏ. 12 ರಂದು ಬೆಳಗ್ಗೆ 7.30ಕ್ಕೆ ರುದ್ರಾಭಿಷೇಕ, 8ಕ್ಕೆ ಕುಂಭಮೇಳ, 9ಕ್ಕೆ ತೊಟ್ಟಿಲು ಕಾರ್ಯಕ್ರಮ, 10.30ಕ್ಕೆ ಸುಗಮ ಸಂಗೀತ, 11ಕ್ಕೆ ಪಲ್ಲಕ್ಕಿ ಉತ್ಸವ, 11.30ಕ್ಕೆ ಭರತ ನಾಟ್ಯ, ಮಧ್ಯಾಹ್ನ 12.30ಕ್ಕೆ ಅನ್ನಪ್ರಸಾದ ವಿತರಣೆ, ಅಂದೇ ಸಂಜೆ 4.37ಕ್ಕೆ ತೇರಿನ ಪೂಜೆ ನಂತರ 5ಕ್ಕೆ ರಥೋತ್ಸವ ನಡೆಯಲಿದ್ದು, ತಿಕೋಟಾದ ಹಿರೇಮಠದ ಶಿವಬಸವ ಸ್ವಾಮೀಜಿ ಪೂಜೆ ನೆರವೇರಿಸುವರು.

ಅಲ್ಲದೆ, ಜಾತ್ರೆ ಅಂಗವಾಗಿ ನಿತ್ಯ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net