ಭಟ್ಕಳದಲ್ಲಿ ವಿವಿಧ ಧಾರ್ವಿುಕ, ಸಾಂಸ್ಕೃತಿಕ ಕಾರ್ಯಕ್ರಮ

BKL SWAMIJI
Published on

ಭಟ್ಕಳ: ಪಟ್ಟಣದ ಶ್ರೀ ಲಕ್ಷ್ಮೀ ನಾರಾಯಣ ರಾಮನಾಥ ಶಾಂತೇರಿ ಕಾಮಾಕ್ಷಿ ಬೇತಾಳ ದೇವಸ್ಥಾನದಲ್ಲಿ ಡಿ. 1ರಿಂದ 7ರವರೆಗೆ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು ಪ್ರಥಮ ಬಾರಿಗೆ ಈ ಸನ್ನಿಧಿಯಲ್ಲಿ ವಾಸ್ತವ್ಯ ದಯಪಾಲಿಸಿದ್ದಾರೆ ಎಂದು ದೇವಸ್ಥಾನದ ಟ್ರಸ್ಟಿ ದಿನೇಶ ಪೈ ಹೇಳಿದರು.

ಶ್ರೀಮದ್ ವಿದ್ಯಾದೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು ಮಾರ್ಗದರ್ಶನ ಮತ್ತು ಉಪಸ್ಥಿತಿಯಲ್ಲಿ ವಿವಿಧ ಧಾರ್ವಿುಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಭಾನುವಾರ ಬೆಳಗ್ಗೆ ನಸುಕಿನಲ್ಲಿ ಶ್ರೀ ದೇವಿಯ ದಿವ್ಯ ರೂಪ ದರ್ಶನ, ಶ್ರೀರಾಮ ನಾಮ ಜಪ ನಡೆಯಲಿದೆ. ಸಂಜೆ 7ಕ್ಕೆ ಶ್ರೀಗಳನ್ನು ಭಟ್ಕಳ ಬೈಪಾಸ್​ನಲ್ಲಿ ಪೂರ್ಣಕುಂಭ ಸ್ವಾಗತದೊಂದಿಗೆ ಅಲಂಕೃತ ಟ್ಯಾಬ್ಲೂನಲ್ಲಿ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಗುವುದು. ಅಮಾವಾಸ್ಯೆ ಪ್ರಯುಕ್ತ ಅಷ್ಟಾವದಾನದೊಂದಿಗೆ ಶ್ರೀ ದೇವರ ಪಲ್ಲಕ್ಕಿ ಉತ್ಸವ, ಶ್ರೀ ದೇವರನ್ನು ದೋಣಿಯಲ್ಲಿ ಇರಿಸಿ ವಿಶೇಷ ದೀಪೋತ್ಸವ, ಪೂಜೆ ಬಳಿಕ ಪ್ರಸಾದ ಭೋಜನ ನಡೆಯಲಿದೆ. ಡಿ. 2ರಂದು ದಿನೇಶ ಪೈ ದಂಪತಿಗಳ ಷಷ್ಟ್ಯ್ದ ಪೂರ್ತಿ ಉಗ್ರರಥ ಶಾಂತಿ, ಸಂಜೆ ಶ್ರೀಗಳಿಂದ ಆಶೀರ್ವಚನ, ಸಭಾ ಕಾರ್ಯಕ್ರಮ, ಬಳಿಕ ಗೀತರಾಮಾಯಣ ಕಾರ್ಯಕ್ರಮ ನಡೆಯಲಿದೆ.

ಡಿ. 3ರಂದು ಧಾರ್ವಿುಕ ಅನುಷ್ಟಾನಗಳೊಂದಿಗೆ ಸಂಜೆ ನರಸಿಂಹ ನೃತ್ಯ ರೂಪಕ, ಡಿ. 4ರಂದು ಭಕ್ತಿ ಸಂಗೀತ ಹಾಗೂ ಮರಾಠಿ ಅಭಂಗ, ಡಿ. 5ರಂದು ಹಿಂದುಸ್ತಾನಿ ಗಾಯನ ಹಾಗೂ ಕೊಳಲು ಜುಗಲ್​ಬಂದಿ ಹುಬ್ಬಳ್ಳಿಯ ಜಯತೀರ್ಥ ಮೇವುಂಡಿ ಮತ್ತು ಬೆಂಗಳೂರಿನ ಪ್ರವೀಣ ಗೊಡ್ಖಿಂಡಿ ಅವರಿಂದ ನಡೆಯಲಿದೆ. ಡಿ. 6ರಂದು ಲಕ್ಷ ಕುಂಕುಮಾರ್ಚನೆ, ಶ್ರೀ ದೇವರಿಗೆ ತೊಟ್ಟಿಲು ಸೇವೆ, ಬಸ್ತಿ ಕವಿತಾ ಶೆಣೈ ವೃಂದದವರಿಂದ ಭಜನ ಸಂಧ್ಯಾ, ಡಿ. 7ರಂದು 5.30ಕ್ಕೆ ಶ್ರೀಗಳನ್ನು ಮುಂದಿನ ಮೊಕ್ಕಾಂಗೆ ಬೀಳ್ಕೊಡುವ ಕಾರ್ಯಕ್ರಮ, ಬಳಿಕ ಚಂಪಾ ಸೃಷ್ಟಿಯ ಪ್ರಯುಕ್ತ ಪಲ್ಲಕ್ಕಿ ಉತ್ಸವ ನಡೆಯಲಿದೆ. ಸಮಾಜ ಬಾಂಧವರು ಶ್ರೀ ಸನ್ನಿಧಿಯಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀ ದೇವಿಯ ಹಾಗೂ ಪರಮಪೂಜ್ಯ ಗುರುವರ್ಯರ ಕೃಪಾನುಗ್ರಹಕ್ಕೆ ಪಾತ್ರರಾಗಬೇಕು ಎಂದು ವಿನಂತಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net