ಮುಂಡರಗಿಯಲ್ಲಿ ಸಾಯಿಬಾಬಾ ಮೂರ್ತಿಗೆ ವಿವಿಧ ಪೂಜೆ

GURU PURNIMI
Published on

ಮುಂಡರಗಿ: ಗುರುಪೂರ್ಣಿಮೆ ಉತ್ಸವ ನಿಮಿತ್ತ ಪಟ್ಟಣದ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಸೋಮವಾರ ವಿವಿಧ ಪೂಜಾ ಕೈಂಕರ್ಯ ನೆರವೇರಿಸಲಾಯಿತು.

ಸಾಯಿಬಾಬಾ ಮೂರ್ತಿಗೆ ಮಂಗಲ ಸ್ನಾನ, ಕಾಕಡಾರತಿ, ಲಘು ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಮಹಾಭಿಷೇಕ, ಕ್ಷೀರಾಭಿಷೇಕ, ಬಿಲ್ವಾರ್ಚನೆ, ಕುಂಕುಮಾರ್ಚನೆ, ನೈವೇದ್ಯ, ಮಹಾಮಂಗಳಾರತಿ, ಸರ್ವಸೇವಾ, ಸತ್ಯನಾರಾಯಣ ಪೂಜೆ, ನವಗ್ರಹ ಶಾಂತಿ ಹೋಮ ಸೇರಿ ವಿವಿಧ ಪೂಜೆಗಳು ಜರುಗಿದವು.

ಸಾಯಿಮೂರ್ತಿಗೆ ವಿವಿಧ ಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ನೂರಾರು ಭಕ್ತರು ಆಗಮಿಸಿ ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು. ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ವಿಶ್ವನಾಥ ಭಟ್ ಜೋಶಿ, ಅರ್ಚಕ ಜಯಣ್ಣ ಪಾಶಿ ಪೂಜಾ ಕೈಂಕರ್ಯ ನೆರವೇರಿಸಿದರು. ಸುಮಾ ಕುಂಬಾರ, ಸಂಜನಾ ಕಪಟಗರ, ಶೋಭಾ ಪಾಟೀಲ, ಸುಹಾಸಿನಿ ಹಳ್ಳಿಕೇರಿ, ಲಕ್ಷ್ಮೀಬಾಯಿ ಕಾಂಬಳೆ, ವೀಣಾ ಅಬ್ಬಿಗೇರಿ, ಹುಲಿಗೆಮ್ಮ ಭಜಂತ್ರಿ, ಸೀತಮ್ಮ ಮೂಲಿಮನಿ, ವಿಜಯಲಕ್ಷ್ಮೀ ದಾನರೆಡ್ಡಿ, ರೇಣುಕಾ ಬದಾಮಿ, ತೇಜಸ್ವಿನಿ ಹೊಸಪೇಟೆ, ಮಹಾದೇವಿ ಪಿಸಗೊಂಡ, ಸುರೇಶ ಕಾಂಬಳೆ, ಪ್ರತಿಭಾ, ಸಂತೋಷ ಕಪಟಗರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net