ಬಳ್ಳಾರಿ : ಜಿಲ್ಲೆಯ ಆರಾಧ್ಯ ದೈವ ಶ್ರೀಕನಕ ದುರ್ಗಮ್ಮ ದೇವಸ್ಥಾನದ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ ಎಂದು ಶಾಸಕ ನಾರಾಭರತರೆಡ್ಡಿ ಹೇಳಿದರು.
ನಗರದ ಶ್ರೀಕನಕ ದುರ್ಗಮ್ಮ ದೇವಸ್ಥಾನದ ಆವರಣದಲ್ಲಿ ದಸರಾ ಮಹೋತ್ಸವ ಅಂಗವಾಗಿ ನಾನಾ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಮತ್ತು ಗಣಿಕೀಕೃತ ರಸೀದಿ ವ್ಯವಸ್ಥೆ ಹಾಗೂ ವೆಬ್ ಸೈಟ್ ಬಿಡುಗಡೆಗೊಳಿಸಿ ಮಾತನಾಡಿದರು. ಕನಕ ದುರ್ಗಮ್ಮ ದೇವಿಯನ್ನು ಜಾತಿ, ಮತ-ಧರ್ಮದ ಭೇದಭಾವವಿಲ್ಲದೇ ದೇವಿಯನ್ನು ಪೂಜಿಸುತ್ತಿದ್ದಾರೆ ಎಂದರು.
ದೇವಿಯ ಆರ್ಶೀವಾದದಿಂದ ಈ ವರ್ಷ ಉತ್ತಮ ಮಳೆಯಾಗುತ್ತಿದೆ. ದೇವಿಯ ಕೃಪೆ ಎಲ್ಲರ ಮೇಲೆ ಇರಲಿ. ದೇವಸ್ಥಾನದಲ್ಲಿ 11 ದಿವಸಗಳ ಕಾಲ ನಡೆಯುವ ಎಲ್ಲ ಕಾರ್ಯಕ್ರಮಗಳನ್ನು ಸಾರ್ವಜನಿಕರು ಭಾಗವಹಿಸಿ ಅಸ್ವಾದಿಸಬೇಕು ಎಂದು ಹೇಳಿದರು.