ಹನುಮ ಜಯಂತಿ ಅಂಗವಾಗಿ ವಿವಿಧ ಕಾರ್ಯಕ್ರಮ

Various programs on the occasion of Hanuman Jayanti
ಶ್ರೀ ಹನುಮಂತದೇವರು
Published on

ಕಲಾದಗಿ: ಪಟ್ಟಣದ ಶ್ರೀ ಹನುಮಂತದೇವರ ದೇವಸ್ಥಾನದಲ್ಲಿ ಹನುಮ ಜಯಂತಿ ಅಂಗವಾಗಿ ಏ.2್ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯದ ಅರ್ಚಕ ತಿಮ್ಮಪ್ಪ ಹ.ಪೂಜಾರ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕೆಯೊಂದಿಗೆ ಬುಧವಾರ ಮಾತನಾಡಿದ ಅವರು,ಬೆಳಗ್ಗೆ 4ಗಂಟೆಯಿಂದ ಹನುಮಂತ ದೇವರಿಗೆ ಅಭಿಷೇಕ ಸೇರಿದಂತೆ ವಿವಿಧ ಪೂಜಾಕಾರ್ಯಗಳು ನೆರವೇರಲಿವೆ.ಬೆಳಗ್ಗೆ 61ಕ್ಕೆ ತೊಟ್ಟಿಲೋತ್ಸವ,8ಗಂಟೆಗೆ ಲೋಕಾಪುರದ ವೈದಿಕ ವಿದ್ವಾನ್ ವೇದಮೂರ್ತಿ ಸುಶಿಲೇಂದ್ರಾಚಾರ್ಯ ರಾ.್ಅವರ ಮುಂದಾಳತ್ವದಲ್ಲಿ ಪವಮಾನ ಹೋಮ ನೆರವೇರಲಿದೆ.ಮಧ್ಯಾಹ್ನ ಅನ್ನಪ್ರಸಾದ ನಡೆಯಲಿದೆ ಎಂದರು.

ಸಂಜೆ 53ಕ್ಕೆ ಬಾಗಲಕೊಟೆಯ ನಟರಾಜ ಸಂಗೀತ ವಿದ್ಯಾಲಯ ಹಾಗೂ ಕಲಾಸಂಘದ ವಿದ್ಯಾರ್ಥಿನಿ ಅದ್ವಿತಾ ನ.ದೇಶಪಾಂಡೆ ಅವರಿಂದ ದಾಸವಾಣಿ ಹಾಗೂ ತುಳಸಿಗೇರಿಯ ಕೃಷ್ಣಾ ವಾರದ ಅವರಿಂದ ಕೊಳಲು ವಾದನ ಸಂಗೀತ ಸೇವೆ ನಡೆಯಲಿದ್ದು,ಇವರಿಗೆ ಬಾಗಲಕೋಟೆಯ ಪ್ರವೀಣ ಮಂಕಣಿ ತಬಲಾ ಸಾಥ್,ಶ್ರೀನಿವಾಸ ಕುಲಕರ್ಣಿ ಹಾರ್ಮೊನಿಯಂ ಸಾಥ್ ನೀಡಲಿದ್ದಾರೆ ಎಂದರು.

ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸೇವೆ ಸಲ್ಲಿಸಬೇಕು ಎಂದು ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net