ನ೨ರಂದು ಎಸ್.ಎಂ.ಎಸ್ ಕಾಲೇಜಿನಲ್ಲಿ ವಿವಿಧ ಕಾರ್ಯಕ್ರಮ

WhatsApp Image 2022-10-31 at 5.19.38 PM
Published on

ಮಡಿಕೇರಿ: ಸುಂಟಿಕೊಪ್ಪದ ಸಯ್ಯದ್ ಮುಹಮ್ಮದ್ ಅಲಿ ಶಿಹಾಬ್ ತಂಙಳ್ ಜೂನಿಯರ್ ಶರೀಅತ್ ಕಾಲೇಜಿನಲ್ಲಿ ನ೨ ರಂದು ಕಾಲೇಜು ಫೆಸ್ಟ್ ಹಾಗೂ ಗ್ರಂಥಾಲಯ ಉದ್ಘಾಟನೆ ಹಾಗೂ ಮರ್ಹೂಂ ಪೂಕಳಂ ಅಬ್ದುಲ್ಲ ಉಸ್ತಾದ್ ಅವರ ಅನುಸ್ಮರಣೆ ಕಾರ್ಯಕ್ರಮ ನಡೆಯಲಿದೆ ಎಂದು ಕಾಲೇಜಿನ ಕಾರ್ಯದರ್ಶಿ ಸಿ.ಎಂ.ಹಮೀದ್ ತಿಳಿಸಿದರು.


ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ೩೦ ರಿಂದ ಮೂರು ದಿನಗಳ ಕಾಲ ಕಾಲೇಜು ಫೆಸ್ಟ್ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ನ.೨ ರಂದು ಸಂಜೆ ೬ ಗಂಟೆಗೆ ಕಾಲೇಜು ಫೆಸ್ಟ್‌ನ ಸಮಾರೋಪ ಸಮಾರಂಭ ಹಾಗೂ ಸುಸಜ್ಜಿತ ಗ್ರಂಥಾಲಯ ಉದ್ಘಾಟನೆ ಮತ್ತು ಪೂಕಳಂ ಅಬ್ದುಲ್ಲ ಉಸ್ತಾದ ಅವರ ಅನುಸ್ಮರಣೆ ನಡೆಯಲಿದೆ.

ಕಾರ್ಯಕ್ರಮವನ್ನು ಪ್ರಖ್ಯಾತ ವಾಗ್ಮಿ ಸಯ್ಯದ್ ಹಮೀದಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಇಬ್ರಾಹಿಂ ಮಾಸ್ಟರ್ ವಹಿಸಲಿದ್ದಾರೆ. ಸಮಸ್ತ ಮುಶಾವರ ಸದಸ್ಯರು ಹಾಗೂ ನಾಯಿಬ್ ಖಾಝಿ ಬಹು ಶೈಖುನಾ ಎಂ.ಎಂ.ಅಬ್ದುಲ್ಲಾ ಫೈಝಿ ಪ್ರಾರ್ಥನೆ ನೆರವೇರಸಲಿದ್ದು, ಬಹು ಅಶ್ರಫ್ ರಹ್ಮಾನಿ ಚೌಕಿ ಪ್ರಭಾಷಣ ಮಾಡಲಿದ್ದಾರೆ. ಕಾರ್ಯಕ್ರಮಕ್ಕೆ ಹಲವಾರು ಧಾರ್ಮಿಕ, ರಾಜಕೀಯ, ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.


ಸುದ್ದಿಗೋಷ್ಠಿಯಲ್ಲಿ ಎಸ್.ಎಂ.ಎಸ್. ಕಾಲೇಜಿನ ಪ್ರಾಂಶುಪಾಲ ಝೈನುದ್ದೀನ್, ಪ್ರೋ. ಉಸ್ಮಾನ್ ಫೈಝಿ, ಕಾಲೇಜು ಸಮಿತಿ ಸದಸ್ಯ ಎಸ್.ಎಂ.ಮುಹಮ್ಮದ್, ರಫೀಕ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net