

ಮೈಸೂರು: ‘ಆರೋಗ್ಯ ಮತ್ತು ಕ್ಷೇಮ’ ಎಂಬ ವಿಚಾರವಾಗಿ ಲಯನ್ಸ್ ಕ್ಲಬ್ ಆ್ ಮೈಸೂರು ವೆಸ್ಟ್ ವತಿಯಿಂದ ನ.12 ಮತ್ತು 13 ರಂದು ಗೋಕುಲಂನ ಸೇವಾನಿಕೇತನ್ ಶಾಲೆ ಆವರಣದಲ್ಲಿ ನಾನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ನಾಗರಾಜ್ ಶ್ರೀನಿವಾಸನ್ ಹೇಳಿದರು.
12ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಸಂಜೆ 6 ಗಂಟೆಗೆ ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ‘ಕಂಸ ವಧೆ’ ಯಕ್ಷಗಾನ ಪ್ರದರ್ಶನ, 13ರಂದು ಬೆಳಗ್ಗೆ 6.30ಕ್ಕೆ ವಾಕಥಾನ್ ಹಾಗೂ ಸೈಕ್ಲಿಂಗ್, ಬೆಳಗ್ಗೆ 8.45 ರಿಂದ 9.30 ರವರೆಗೆ ಯೋಗ ನಿದ್ರೆ ಕಾರ್ಯಕ್ರಮ ನಡೆಯಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಲಯನ್ಸ್ ಕ್ಲಬ್ ಆ್ ಮೈಸೂರು ವೆಸ್ಟ್ ಪದಾಧಿಕಾರಿಗಳಾದ ಮಹೇಶ್ ರಾವ್, ಡಾ.ಸನತ್ ಹೆಗಡೆ, ಕೆ.ಎಸ್.ಗುರುರಾಜ್ ಇತರರಿದ್ದರು.