

ಸಿದ್ದಾಪುರ: ಇತ್ತೀಚೆಗೆ ಭಾರತೀಯ ವಾಯುಸೇನೆಯ ಹೆಲಿಕಾಪ್ಟರ್ ಪ್ಯಾರಾಚೂಟ್ ಓಪನ್ ಆಗದೆ ದುರ್ಮರಣ ಹೊಂದಿದ್ದ ವಾರಂಟ್ ಆಫೀಸರ್ ಜಿ.ಎಸ್. ಮಂಜುನಾಥ ಅವರಿಗೆ ಸಿದ್ದಾಪುರ ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕುಮಾರ ಗೌಡರ ನೇತೃತ್ವದಲ್ಲಿ ವಿವಿಧ ಸಂಘಟನೆಗಳಿಂದ ಬುಧವಾರ ಭಾವನಮನ ಸಲ್ಲಿಸಲಾಯಿತು.
ತಹಸೀಲ್ದಾರ ಎಂ.ಆರ್. ಕುಲಕರ್ಣಿ, ಉಪತಹಸೀಲ್ದಾರ ಜಿ.ಎಲ್. ಶಾಮಸುಂದರ್, ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಪಿ. ಡಿ ನಾಯ್ಕ, ಕ್ಯಾಪ್ಟನ್ ರಾಜೇಶ್ ನಾಯ್ಕ, ಸಂಘದ ಪದಾಧಿಕಾರಿಗಳು, ಸದಸ್ಯರು, ತಾಲೂಕು ಕಸಾಪ ಅಧ್ಯಕ್ಷ ಗೋಪಾಲ ನಾಯ್ಕ, ಗೌರವ ಕಾರ್ಯದರ್ಶಿ ಅಣ್ಣಪ್ಪ ನಾಯ್ಕ, ಪಿ.ಬಿ. ಹೊಸೂರು, ಮಂಜುನಾಥ ಭಟ್ಟ , ಪಪಂ ಸದಸ್ಯ ಗುರುರಾಜ ಶಾನಬಾಗ್, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಟಿ.ಕೆ. ನಾಯ್ಕ, ಡಾ.ರಾಜು ಭಟ್ಟ, ಉಮೇಶ ಟಪಾಲ್ ಇತರರು ನುಡಿನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲೂಕಿನ ನಿವೃತ್ತ ಹಾಗೂ ಹಾಲಿ ಸೈನಿಕರು, ವಿವಿಧ ಸಂಘಟನೆಯ ಪದಾಧಿಕಾರಿಗಳು ವೀರಯೋಧನ ಸ್ಮರಣೆಗಾಗಿ ಮೇಣದ ಬತ್ತಿ ಹಿಡಿದು ಪಟ್ಟಣದ ಹಳೆ ಬಸ್ ನಿಲ್ದಾಣ, ತಹಸೀಲ್ದಾರ ಕಚೇರಿ, ಅಂಬೇಡ್ಕರ್ ವೃತ್ತ, ತಿಮ್ಮಪ್ಪ ನಾಯ್ಕ ವೃತ್ತದ ಮೂಲಕ ಆಗಮಿಸಿ ನಂತರ ರಾಮಕೃಷ್ಣ ಹೆಗಡೆ ವೃತ್ತದಲ್ಲಿ ಎಲ್ಲರೂ ಭಾವಚಿತ್ರಕ್ಕೆ ದೀಪಾಂಜಲಿ ಬೆಳಗಿ ಪುಷ್ಪನಮನ ಸಲ್ಲಿಸಲಾಯಿತು.