

ಮೈಸೂರು: ಲಯನ್ಸ್ ಕ್ಲಬ್ ಆಫ್ ಮೈಸೂರು ವೆಸ್,್ಟ ಮಹಾರಾಜ ಶಿಕ್ಷಣ ಸಂಸ್ಥೆ ಹಾಗೂ ಡ್ರೀಮ್ ಇಂಕ್‌ನಿಂದ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಆರೋಗ್ಯಕ್ಕಾಗಿ ಓಟಕ್ಕೆ ಲಯನ್ಸ್ ಜಿಲ್ಲಾ ಗವರ್ನರ್ ಸುಬ್ರಹ್ಮಣ್ಯ ಚಾಲನೆ ನೀಡಿದರು.
ಮಹಾರಾಜ ಕಾಲೇಜಿನ ಮೈದಾನದಿಂದ ಆರಂಭವಾದ ಓಟದಲ್ಲಿ 800ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಮಾನಸಗಂಗೋತ್ರಿಯ ಮುಖ್ಯ ದ್ವಾರದ ಪಡೆ ಕುವೆಂಪು ಪ್ರತಿಮೆಯನ್ನು ಸುತ್ತುಹಾಕಿ ಮರಳಿ ಮಹಾರಾಜ ಕಾಲೇಜಿನ ಮೈದಾನಕ್ಕೆ ವಾಪಸ್ ಅಯಿತು. ಸುಮಾರು ಐದು ಕಿಲೋಮೀಟರ್ ಈ ಓಟದಲ್ಲಿ ಭಾಗವಹಿಸಿದ್ದ ಮೂರು ವಿಭಾಗಗಳಲ್ಲಿ ಬಹುಮಾನ ವಿತರಿಸಲಾಯಿತು.
ಸಹನಾ, ಮಾಧುರ್ಯ, ಆರ್.ಪುರುಷೋತ್ತಮ್, ಎಂ.ಆದಿತ್ಯ ಇತರರು ಬಹುಮಾನ ಪಡೆದುಕೊಂಡರು. ವಿಜೇತರಿಗೆ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಬಹುಮಾನ ವಿತರಿಸಿದರು.
ಲಯನ್ಸ್ ಕ್ಲಬ್ ಆಫ್ ಮೈಸೂರ್ ವೆಸ್ಟ್ ಅಧ್ಯಕ್ಷ ಡಾ.ಎಚ್.ಕೆ ಚೇತನ್, ಕಾರ್ಯದರ್ಶಿ ಧಮೇಂದ್ರ, ಖಜಾಂಚಿ ಸಂತೋಷ್ ಇತರರುಇದ್ದರು.