ನೈರ್ಮಲ್ಯ ನಿರ್ವಹಣೆಗೆ ನಾನಾ ಕಸರತ್ತುಗಳು

7
Published on

ಚಿಕ್ಕಬಳ್ಳಾಪುರ: ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಯೋಜನೆಯಡಿ ನೈರ್ಮಲ್ಯ ನಿರ್ವಹಣೆ ನಿಟ್ಟಿನಲ್ಲಿ ನಾನಾ ಕಸರತ್ತುಗಳು ನಡೆಯುತ್ತಿವೆ.

ಜಿಲ್ಲೆಯಲ್ಲಿ 157 ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ 53 ತ್ಯಾಜ್ಯ ನಿರ್ವಹಣೆ ಘಟಕಗಳನ್ನು ನಿರ್ಮಿಸುವ ಗುರಿ ಪೈಕಿ 146 ಗ್ರಾ.ಪಂ.ವ್ಯಾಪ್ತಿಯಲ್ಲಿ 48 ಘಟಕಗಳ ಕೆಲಸವು ಪೂರ್ಣಗೊಂಡಿದೆ. ಈಗಾಗಲೇ ಚಿಕ್ಕಬಳ್ಳಾಪುರ ಮತ್ತು ಬಾಗೇಪಲ್ಲಿ ತಾಲೂಕು ವ್ಯಾಪ್ತಿಯಲ್ಲಿ 8 ಗ್ರಾ.ಪಂ.ಗಳ ನೈರ್ಮಲ್ಯ ನಿರ್ವಹಣೆಯ ಉದ್ದೇಶದಲ್ಲಿ ಸ್ಥಳಿಯ ನಗರಸಭೆ, ಪುರಸಭೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಉಳಿದಂತೆ 6 ಗ್ರಾ.ಪಂ.ಗಳಲ್ಲಿ 3 ಟಕಗಳ ಕೆಲಸವು ಪಾಯ ಹಂತದಲ್ಲಿದ್ದು 5 ಗ್ರಾ.ಪಂ.ವ್ಯಾಪ್ತಿಯಲ್ಲಿ 2 ಘಟಕಗಳ ನಿರ್ಮಾಣಕ್ಕೆ ಜಾಗದ ಸಮಸ್ಯೆ ಕಂಡು ಬಂದಿದೆ.

*ಸಮುದಾಯ ಶೌಚಗೃಹ

ಕಳೆದ 2023-24 ನೇ ಸಾಲಿನಿಂದ ಇಲ್ಲಿಯವರೆಗೂ 29 ಸಮುದಾಯ ಶೌಚಗೃಹ ನಿರ್ಮಾಣದ ಡಿಪಿಆರ್ ಅನುಮೋದನೆಗೊಂಡಿದ್ದು 27 ಸಮುದಾಯ ಶೌಚಗೃಹಗಳು ನಿರ್ಮಾಣಗೊಂಡಿವೆ. ಉಳಿದಂತೆ 2 ಕಡೆ ಪ್ರಗತಿಯ ಕೆಲಸವು ವಿವಿಧ ಹಂತಗಳಲ್ಲಿ ಉಳಿದಿದೆ. ವೈಯಕ್ತಿಕ ಶೌಚಗೃಹ ನಿರ್ಮಾಣಕ್ಕೆ ಸಂಬAಧಿಸಿದAತೆ 1544 ಗುರಿ ಪೈಕಿ 933 ಮಾತ್ರ ನಿರ್ಮಾಣವಾಗಿದ್ದು ಉದ್ದೇಶಿತ ಗುರಿ ಸಾಧನೆಯಲ್ಲಿ ಹೆಚ್ಚಿನ ಪ್ರಗತಿ ಕಂಡು ಬಂದಿಲ್ಲ.

*ತ್ಯಾಜ್ಯ ನಿರ್ವಹಣೆ

ಸ್ವಚ್ಛ ಭಾರತ್ ಅಭಿಯಾನದಡಿ ಗ್ರಾಮಗಳಲ್ಲಿ ಹಸಿ ಮತ್ತು ಒಣ ಹಸಿ ಪ್ರತ್ಯೇಕ ಸಂಗ್ರಹ, ತ್ಯಾಜ್ಯ ಮತ್ತು ದ್ರವ ತ್ಯಾಜ್ಯ ಪ್ರತ್ಯೇಕ ನಿರ್ವಹಣೆಯ ನಿಟ್ಟಿನಲ್ಲಿ ಆದ್ಯತೆ ನೀಡಲಾಗಿದೆ.

ಅದರಂತೆ 157 ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ 146 ಕಡೆ ನ ತ್ಯಾಜ್ಯ, 2647 ಗ್ರಾಮಗಳಲ್ಲಿ ದ್ರವ್ಯ ತ್ಯಾಜ್ಯ ನಿರ್ವಹಣೆ ಗುರಿ ಪೈಕಿ 387 ಗ್ರಾಮಗಳಲ್ಲಿ ಮಾತ್ರ ಸಾಧನೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net