ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

27savadatt3
Published on

ಸವದತ್ತಿ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಗ್ರೇಡ್​&2 ತಹಸೀಲ್ದಾರ್​ ಎಂ.ಎನ್​.ಮಠದ ಅವರ ಮೂಲಕ ಗುರುವಾರ ಮನವಿ ಸಲ್ಲಿಸಲಾಯಿತು.

ರೈತ ಸಂದ ಕಾರ್ಯದರ್ಶಿ ಬಸವರಾಜ ಬಿಜ್ಜುರ ಮಾತನಾಡಿ, ಬೇಸಿಗೆಯಲ್ಲಿ ರೈತರ ಪಂಪಸೆಟ್​ಗಳಿಗೆ ತೊಂದರೆಯಾಗದಂತೆ 7 ಗಂಟೆ ವಿದ್ಯುತ್​ ಪೂರೈಸಬೇಕು. ಮಲಪ್ರಭಾ ನೀರನ್ನು ಕೈಗಾರಿಕೆ ಮತ್ತು ಖಾಸಗಿ ಕಂಪನಿಗಳಿಗೆ ಪೂರೈಸುವ ಯೋಜನೆ ಕೂಡಲೇ ಕೈಬಿಡಬೇಕು. ಅಲ್ಲದೇ ರೈತರ ಕೃಷಿ ಸಾಲ ಮನ್ನಾ ಮಾಡಬೇಕು. ಇಲ್ಲವಾದಲ್ಲಿ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.

ಸಂದ ತಾಲೂಕಾಧ್ಯ ಸುರೇಶ ಸಂಪಗಾವಿ, ಮಹಾಂತೇಶ ಮುತವಾಡ, ಸಿದ್ದಪ್ಪ ಪಟ್ಟದಕಲ್ಲ, ಶಂಕರ ಹಿತ್ತಲಮನಿ, ಶಿದ್ದಪ್ಪ ಚಂದರಗಿ,

ಈರಪ್ಪ ಕಾಳಗಿ, ಸುರೇಶ ಅಂಗಡಿ, ನಾಗಪ್ಪ ಯಮನೂರ, ಎಸ್​.ಎಂ.ಬಡಿಗೇರ, ಸುನೀತಾ ರೇವಣ್ಣವರ, ಮಂಜುಳಾ ಜಿರಗವಾಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net