

ಚಿಕ್ಕೋಡಿ: ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮುಖ್ಯೋಪಾಧ್ಯಾಯರ ಹುದ್ದೆಗೆ ಬಡ್ತಿ ನೀಡುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಶನಿವಾರ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚಿಕ್ಕೋಡಿ ತಾಲೂಕು ಘಟಕದಿಂದ ಬಿಇಒ ಬಿ.ಎ.ಮೇಕನಮರಡಿ ಅವರಿಗೆ ಮನವಿ ಸಲ್ಲಿಸಿದರು.
ಶಿಕ್ಷಣ ಇಲಾಖೆ ಈ ಹಿಂದೆ ನಡೆಸುತ್ತಿದ್ದ ಗುರುಸ್ಪಂದನ ಕಾರ್ಯಕ್ರಮ ಆಯೋಜಿಸಬೇಕು. ಶಿಕ್ಷಕರ ವರ್ಗಾವಣೆ ಮಾಡಬೇಕು. ಶಿಕ್ಷಕರಿಗೆ ಬರಬೇಕಾದ ಡಿಎ ಅರಿಯರ್ಸ್‌ನ್ನು ಶಿಕ್ಷಕರ ಬ್ಯಾಂಕ್ ಖಾತೆಗೆ ಜಮೆ ಮಾಡುವುದು ಶಿಕ್ಷಕರ ವಿವಿಧ ಸಮಸ್ಯೆಗಳಿಗೆ ಸ್ಪಂದಿಸುವಂತೆ ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಬಿಇಒ ಬಿ.ಎ.ಮೇಕನಮರಡಿ ಮಾತನಾಡಿ, ಶಿಕ್ಷಕರ ಸಮಸ್ಯೆಗೆ ಸ್ಪಂದಿಸಲಾಗುವುದು. ಆದಷ್ಟು ಬೇಗ ಗುರುಸ್ಪಂದನ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು. ಸಂಘದ ತಾಲೂಕಾಧ್ಯಕ್ಷ ಎಸ್.ಎಸ್.ಧುಪದಾಳ, ಕಾರ್ಯದರ್ಶಿ ಜಿ.ಎಂ.ಕಾಂಬಳೆ, ಸಿದ್ದಣ್ಣ ಯಡೂರಕರ, ಲತಾ ಯಾದಗೂಡೆ, ಜಿ.ಎಲ್.ಕಟ್ಟಿ, ಪ್ರಭಾವತಿ ಗುಂಡಿ, ವಿ.ಆರ್.ಢಾಲೆ, ಪುಷ್ಪ ಕಾಂಬಳೆ, ನಿರ್ಮಲಾ ರುಗೆ, ಅಜಿತ ಹುಣಶ್ಯಾಳೆ, ಎಸ್.ಆರ್.ಮರಡಿ ಇತರರಿದ್ದರು.