ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

9
ಸರ್ಕಾರಿ ನೌಕರರ ವಿವಿಧ ಬೇಡಿಕೆ ಈಡೇರಿಸಬೇಕೆಂದು ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿಗೆ ಸಂಘದ ಸದಸ್ಯರು ಮನವಿ ಸಲ್ಲಿಸಿದರು. ಶಿವಾನಂದ ಕುಡಸೋಮಣ್ಣವರ, ಎಸ್.ಡಿ. ಗಂಗನ್ನವರ, ಹೇಮಾ ಕುಲಕರ್ಣಿ ಇತರರು ಇದ್ದರು.
Published on

ಬೈಲಹೊಂಗಲ: ಸರ್ಕಾರಿ ನೌಕರರ ವಿವಿಧ ಬೇಡಿಕೆ ಈಡೇರಿಸಬೇಕೆಂದು ತಾಲೂಕು ಸರ್ಕಾರಿ ನೌಕರರ ಸಂಘದಿಂದ ಶಾಸಕ ಮಹಾಂತೇಶ ಕೌಜಲಗಿ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.

ಅಧ್ಯಕ್ಷ ಶಿವಾನಂದ ಕುಡಸೋಮಣ್ಣವರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಎಸ್.ಡಿ. ಗಂಗನ್ನವರ ಮಾತನಾಡಿ, ಸರ್ಕಾರ 7ನೇ ವೇತನ ಆಯೋಗದ ವರದಿ ಪಡೆದು ಶೇ. 40 ಫಿಟ್‌ಮೆಂಟ್ ಸೌಲಭ್ಯ 2022ರ ಜುಲೈ 1ರಿಂದ ಜಾರಿಗೆ ಬರುವಂತೆ ಆದೇಶಿಸಬೇಕು. ನೌಕರರನ್ನು ಒಪಿಎಸ್ ವ್ಯಾಪ್ತಿಗೆ ತಂದು ಜಾರಿಗೊಳಿಸಬೇಕು. ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ ಸರ್ಕಾರಿ ನೌಕರರು ಮತ್ತವರ ಕುಟುಂಬಕ್ಕೂ ವಿಸ್ತರಿಸಬೇಕು ಎಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿದ ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಭರವಸೆ ನೀಡಿದರು. ಸಂಘದ ಕಾರ್ಯದರ್ಶಿ ಸಿ.ಎಸ್. ಭಜಂತ್ರಿ, ಖಜಾಂಚಿ ಪಿ.ಪಿ. ಸೊಂಟಕ್ಕಿ, ಆರ್.ಆರ್. ದೊಡಗೌಡರ, ಡಿ.ಎಸ್. ದೇಸಾಯಿ, ಡಿ.ಎಂ. ಮಿರ್ಜನ್ನವರ, ಎಚ್.ಆರ್. ಪಾಟೀಲ, ಎಂ.ಜೆ.ಕೆ. ಹಿರೇಮಠ, ಎಂ.ಬಿ.ಮುಲ್ಲಾ, ಬಿ.ಎಸ್. ಕೀರಸ್ವಾಮಿಮಠ, ಶಂಕರ ಸಾಗರ, ಹೇಮಾ ಕುಲಕರ್ಣಿ, ರುದ್ರಮ್ಮ ಚಲವಾದಿ, ಪುಷ್ಪಾ ಕಳಸನ್ನವರ, ಹೌಸೆಮ್ಮ ನಿಕಂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net