ಕೃಷ್ಣಾಷ್ಟಮಿ ಅಂಗವಾಗಿ ವಿವಿಧ ಸ್ಪರ್ಧೆ

Janmashatami Programme
Published on

ಭಟ್ಕಳ: ಇಲ್ಲಿನ ಸೋನಾರ ಕೇರಿಯ ದೈವಜ್ಞ ಸಭಾಭವನದಲ್ಲಿ ಜ್ಞಾನೇಶ್ವರಿ ಮಹಿಳಾ ಮಂಡಳಿಯಿಂದ ಕೃಷ್ಣಾಷ್ಟಮಿಯ ಹಿನ್ನೆಲೆಯಲ್ಲಿ ಮುದ್ದು ರಾಧೆ, ಮುದ್ದು ಕೃಷ್ಣ , ಯಶೋಧೆ ಕೃಷ್ಣ ಹಾಗೂ ಭಗವದ್ಗೀತೆ ಪಠಣ ಸ್ಪರ್ಧೆನಡೆಯಿತು.

ದೈವಜ್ಞ ಸಮಾಜದ ಅಧ್ಯಕ್ಷ ಸುಧಾಕರ ಮಾನಕಾಮೆ ಕಾರ್ಯಕ್ರಮ ಉದ್ಘಾಟಿಸಿದರು. ಕಸಾಪ ಅಧ್ಯಕ್ಷ ಗಂಗಾಧರ ನಾಯ್ಕ, ಜ್ಞಾನೇಶ್ವರಿ ಮಹಿಳಾ ಮಂಡಳಿ ಅಧ್ಯಕ್ಷೆ ಪರಿಮಳಾ ರಾಜಶೇಖರ್ ಶೇಟ್, ವಿದ್ಯಾ ಭಾರತಿ ಶಾಲೆಯ ಮುಖ್ಯಾಧ್ಯಾಪಕಿ ರೂಪ ಖಾರ್ವಿ, ಶಿಕ್ಷಕ ಸುರೇಶ ಮರ್ಡೆಶ್ವರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ವಿವಿಧ ಸ್ಪರ್ಧೆಗಳ ನಿರ್ಣಯವನ್ನು ನೀಡಿದರು. ಯುವಕ ಮಂಡಳಿ ಅಧ್ಯಕ್ಷ ಅಣ್ಣಪ್ಪ ಕೊಗ್ಗ ಶೇಟ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಿರಿಯ ವಿಭಾಗದ ಭಗವದ್ಗೀತೆ ಪಠಣದಲ್ಲಿ ಮನ್ವಿತಾ ಶೇಟ್ ಪ್ರಥಮ, ರಿತೀಶ ರಾಜೇಶ್ ಶೆಟ್ ದ್ವಿತೀಯ, ಪಾವನಿ ಜನಾರ್ದನ್ ಶೇಟ್ ತೃತೀಯ. ಹಿರಿಯರ ವಿಭಾಗದಲ್ಲಿ ಜನನಿ ಶೆಟ್ ಪ್ರಥಮ. ಪ್ರೇರಣ ಸುಬ್ರಹ್ಮಣ್ಯ ದ್ವಿತೀಯ. ಸ್ಪೂರ್ತಿ ಶೇಟ್ ತೃತೀಯ. ಮಹಿಳೆಯರ ವಿಭಾಗದಲ್ಲಿ ಮಮತಾ ಶೇಟ್ ದ್ವಿತೀಯ. ರೇಖಾ ರಾಯ್ಕರ್, ನರ್ಮದಾ ಶೇಟ್ ತೃತೀಯ ಸ್ಥಾನ ಪಡೆದರು.

ಮುದ್ದುಕೃಷ್ಣ ಮುದ್ದು ರಾಧಾ ಸ್ಪರ್ಧೆಯ ಕಿರಿಯರ ವಿಭಾಗದಲ್ಲಿ ಗೌತಮಿ ಶೇಟ್ ಪ್ರಥಮ. ಓಂಕಾರ್ ಶೇಟ್ ದ್ವಿತೀಯ. ಸಾಯಿಚರಣ್ ಶೇಟ್ ತೃತೀಯ, ಹಿರಿಯರ ವಿಭಾಗದಲ್ಲಿ ಯಶಸ್ವಿನಿ ಶೇಟ್. ಪ್ರಥಮ, ರಿತಿಶಾ ಶೆಟ್ ದ್ವಿತೀಯ. ಶ್ರೀಲಕ್ಷ್ಮಿ ಶೇಟ್ ತೃತೀಯ, ಯಶೋಧ ಕೃಷ್ಣ ಸ್ಪರ್ಧೆಯಲ್ಲಿ ಪ್ರಭಾ ಮತ್ತು ಓಂಕಾರ್ ಪ್ರಥಮ, ಪುಷ್ಪಾಂಜಲಿ ಮತ್ತು ಸಾನ್ವಿ ದ್ವಿತೀಯ, ದೀಪ ಮತ್ತು ಗೌತಮಿ, ರೇಣುಕಾ ಸಾಯಿಚರಣ್ ಮತ್ತು ಮಂಜುಳಾ ಅನಿಶ್ ತೃತೀಯ ಬಹುಮಾನ ಪಡೆದರು.

ಸವಿತಾ ರತ್ನಾಕರ್ ಶೇಟ್ ನಿರೂಪಿಸಿ ಎಲ್ಲರನ್ನೂ ಸ್ವಾಗತಿಸಿ ವಂದಿಸಿದರು. ದೀಪಾ ಸಂದೀಪ್ ಶೇಟ್ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಜ್ಞಾನೇಶ್ವರಿ ಮಹಿಳಾ ಮಂಡಳಿಯ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಕಿರಿಯರ ವಿಭಾಗದ ಭಗವದ್ಗೀತೆ ಪಠಣದಲ್ಲಿ ಮನ್ವಿತಾ ಶೇಟ್ ಪ್ರಥಮ, ರಿತೀಶ ಶೇಟ್ ದ್ವಿತೀಯ, ಪಾವನಿ ಜನಾರ್ದನ್ ಶೇಟ್ ತೃತೀಯ ಸ್ಥಾನ ಪಡೆದರೆ ಹಿರಿಯ ವಿಭಾಗದಲ್ಲಿ ಜನನಿ ಶೆಟ್ ಪ್ರಥಮ, ಪ್ರೇರಣ ದ್ವಿತೀಯ, ಸ್ಪೂರ್ತಿ ್ರ ಶೇಟ್ ತೃತೀಯ ಸ್ಥಾನ ,ಮಹಿಳೆಯರ ವಿಭಾಗದಲ್ಲಿ. ಮಮತಾ ಶೇಟ್ ಪ್ರಥಮ, ರೇಖಾ ರಾಯ್ಕರ್ ದ್ವಿತೀಯ ಹಾಗೂ ನರ್ಮದಾ ಮಂಜುನಾಥ್ ಶೇಟ್ ತೃತೀಯ ಸ್ಥಾನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net