ಅ೧೮ ರಿಂದ ೨೦ರವರೆಗೆ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ

4660afd0-54f7-41ae-bd8b-3af8d71ed32d
Published on

ಮಡಿಕೇರಿ: ಮೈಸೂರಿನ ಎಟಿಎಂಇ ಇಂಜಿನಿಯರಿಂಗ್ ಕಾಲೇಜು ಸಿದ್ಧಪಡಿಸಿರುವ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅನುಮೋದಿತ ಗ್ರಾಮೀಣಾಭಿವೃದ್ಧಿ ಯೋಜನೆಯ ಅಂಗವಾಗಿ ಕುಶಾಲನಗರದ ಕೆಎಮ್ಟಿ ಆಂಗ್ಲ ಮಾಧ್ಯಮ ಶಾಲೆಯ ಸಹಯೋಗದೊಂದಿಗೆ ವಿಸ್ಡಂ ಪಿಯು ಕಾಲೇಜಿನಲ್ಲಿ ಅ೧೮ ರಿಂದ ೨೦ರವರೆಗೆ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ಕಾಲೇಜಿನ ಆಡಳಿತ ಅಧಿಕಾರಿ ಡಾ.ಸಚ್ಚಿದಾನಂದ ಮೂರ್ತಿ ತಿಳಿಸಿದರು.


ಅ೧೮ ರಂದು ಬೆಳಿಗ್ಗೆ ೧೦ ರಿಂದ ೩ ರವರೆಗೆ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತ ಪ್ರಬಂಧ ಸ್ಪರ್ಧೆ, "ಆಶುಭಾಷಣ ಸ್ಪರ್ಧೆ ಮತ್ತು ಭಿತ್ತಿಪತ್ರ ಪ್ರದರ್ಶನ’’ ನಡೆಯಲಿದೆ. ಅ.೧೯ ರಂದು ಬೆಳಿಗ್ಗೆ ೯.೩೦ ರಿಂದ ಸಂಜೆ ೩ ಗಂಟೆವರೆಗೆ ‘‘ಹ್ಯಾಕಾತಾನ್ ಮತ್ತು "ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ನಡೆಯಲಿದ್ದು, ಅ೨೦ ರಂದು ೯.೩೦ ರಿಂದ ೧.೩೦ ರವರೆಗೆ ವಿವಿಧ ತಾಂತ್ರಿಕ ಯೋಜನೆ ಪ್ರದರ್ಶನ ಸ್ಪರ್ಧೆ ನಡೆಯಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಆಸಕ್ತ ಸ್ಪರ್ಧಿಗಳು ಮುಂಚಿತವಾಗಿ ಕಾಲೇಜಿನ ವೆಬ್‌ಸೈಟ್: www.atme.in ಲಾಗಿನ್ ಆಗಿ ಅಲ್ಲಿನ ರಿಜಿಸ್ಟ್ರೇಶನ್ ಲಿಂಕ್ ಮೂಲಕ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಡಾ.ಎಲ್.ಯತೀಶ- ೯೯೦೨೨೩೮೭೬೮, ಪ್ರೋ.ಕೆ.ಎನ್.ಗುರುಪ್ರಸಾದ್-೯೭೩೯೩೧೯೫೬೭ ಸಂಪರ್ಕಿಸಬಹುದಾಗಿದೆ.


ಸುದ್ದಿಗೋಷ್ಠಿಯಲ್ಲಿ ಯೋಜನೆ ಅನುಷ್ಠಾನ ಸಂಯೋಜಕ ಡಾ.ಎಲ್.ಯತೀಶ್, ಪ್ರೋ.ಕೆ.ಎಸ್.ಗುರುಪ್ರಸಾದ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net