ಮಕ್ಕಳಿಗಾಗಿ ವಿವಿಧ ಸ್ಪರ್ಧೆ ನ. 23ರಂದು

sparsha
Published on

ಹುಬ್ಬಳ್ಳಿ: ಇಲ್ಲಿಯ ಹೊಸೂರಿನ ಗೋಲ್ಡನ್​ಟೌನ್​ನಲ್ಲಿರುವ ಸ್ಮರ್ಶಂ ಮಕ್ಕಳ ಆಸ್ಪತ್ರೆಯಲ್ಲಿ ನ. 23ರಂದು ಮಕ್ಕಳಿಗಾಗಿ ಫ್ಯಾನ್ಸಿ ಡ್ರೆಸ್ ಮತ್ತು ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ.

ಚಿತ್ರಕಲಾ ಸ್ಪರ್ಧೆಯು ಮಧ್ಯಾಹ್ನ 12ರಿಂದ 1, ಫ್ಯಾನ್ಸಿ ಡ್ರೆಸ್ ಸ್ಪರ್ಧೆಯು ಮಧ್ಯಾಹ್ನ 2ರಿಂದ 3ರವರೆಗೆ ನಡೆಯಲಿದೆ. 14 ವರ್ಷದೊಳಗಿನ ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಗೆದ್ದ ಮಕ್ಕಳಿಗೆ ಬಹುಮಾನ ಕೊಡಲಾಗುವುದು. ಪ್ರವೇಶ ಉಚಿತವಿದೆ. ಆಸಕ್ತರು ಆಸ್ಪತ್ರೆಯಲ್ಲಿ ಹೆಸರು ನೋಂದಾಯಿಸಬಹುದು ಎಂದು ಆಡಳಿತಾಧಿಕಾರಿ ಆನಂದ ಬಾಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net