

ಗದಗ: ಸ್ಥಳೀಯ ಬಸವೇಶ್ವರ ನಗರದ ಗಜಾನನೋತ್ಸವ ವಿವಿಧೋದ್ದೇಶಗಳ ಸೇವಾ ಸಂಘದ ಗಜಾನನೋತ್ಸವ ಸಮಿತಿಯ 133ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಹಾಗೂ ಮಂಡಳಿಯ 37ನೇ ವರ್ಷದ ಗಣೇಶೋತ್ಸವ ಪ್ರಯುಕ್ತ ಬಣಗಾರ ಸಮಾಜದ ವತಿಯಿಂದ ಪ್ರತಿಭಾ ಪುರಸ್ಕಾರ, ಮದುವೆಯಾಗಿ 50 ವರ್ಷ ಪೂರೈಸಿದ ದಂಪತಿಗಳಿಗೆ ಸನ್ಮಾನ, ಚಿಕ್ಕ ಮಕ್ಕಳಿಗೆ ಡಾನ್ಸ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಚಾಲಕ ಮಹಾಂತೇಶ ಕಾತರಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.