27ರಿಂದ ಗೋಣಿಕೊಪ್ಪ ದಸರಾ ಜನೋತ್ಸವದಲ್ಲಿ ವಿವಿಧ ಸ್ಪರ್ಧೆಗಳು

02
Published on

ಗೋಣಿಕೊಪ್ಪಲು: ಗೋಣಿಕೊಪ್ಪ ದಸರಾ ಜನೋತ್ಸವ ಅಂಗವಾಗಿ ಸೆ.27ರಂದು ಮಹಿಳಾ ದಸರಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಹಿಳಾ ದಸರಾ ಸಮಿತಿ ಅಧ್ಯಕ್ಷೆ ಎಂ.ಮಂಜುಳಾ ಹೇಳಿದರು.

ಅಂದು ಬೆಳಗ್ಗೆ 9ಗಂಟೆಯಿಂದ ಆರಂಭವಾಗುವ ಕಾರ್ಯಕ್ರಮದಲ್ಲಿ ಕ್ರೀಡೆ, ಸಾಂಸ್ಕೃತಿಕ ಹಾಗೂ ಇನ್ನಿತರ ಕಾರ್ಯಕ್ರಮಗಳು ಸಂಜೆ ತನಕ ಜರುಗಲಿದೆ. ಶ್ರೀ ಕಾವೇರಿ ದಸರಾ ಸಮಿತಿ ಸಹಯೋಗದೊಂದಿಗೆ ನಡೆಯುವ ಕಾರ್ಯಕ್ರಮದಲ್ಲಿ ಮಹಿಳೆಯರಿಗಾಗಿಯೇ ವಿವಿಧ ಕಾರ್ಯಕ್ರಮಗಳನ್ನು ಕಾವೇರಿ ಕಲಾ ವೇದಿಕೆಯಲ್ಲಿ ಹಾಗೂ ದಸರಾ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಕ್ರಮ ವಿವರ: ಸ್ಪರ್ಧೆಗಳು ಬೆಳಗ್ಗೆ 9.30ರಿಂದ 10.30ರವರೆಗೆ ನಡೆಯುವ ಸ್ಪರ್ಧೆಗಳು. ಹೂ ಜೋಡಣೆ, ಬೆಂಕಿ ಇಲ್ಲದ ಅಡುಗೆ, ಮೆಹಂದಿ ಹಾಕುವುದು, ಮಹಿಳೆಯರ ಸ್ವ-ಉತ್ಪನ್ನ ಮಾರುಕಟ್ಟೆ. ಬೆಳಗ್ಗೆ 10ರಿಂದ 12ರವರೆಗೆ ನಡೆಯುವ ಸ್ಪರ್ಧೆಗಳು. ನಿಂಬೆಹಣ್ಣು ಚಮಚ ಓಟ, ಬೊಂಬ್ ಇನ್ ದ ಸಿಟಿ, ಚೀಲದ ಓಟ, 60 ವರ್ಷ ಮೇಲ್ಪಟ್ಟವರಿಗೆ ವೇಗದ ನಡಿಗೆ, ಮಧ್ಯಾಹ್ನ 12 ಗಂಟೆಗೆ ಹಗ್ಗ ಜಗ್ಗಾಟ ಸ್ಪರ್ಧೆ ಇರಲಿದೆ. ಮಧ್ಯಾಹ್ನ 1 ಗಂಟೆಯಿಂದ ವೇದಿಕೆಯಲ್ಲಿ ನಡೆಯುವ ಸಾಂಸ್ಕೃತಿಕ ಸ್ಪರ್ಧೆಗಳು. ಸಾಮೂಹಿಕ ನೃತ್ಯ, ಸಾಮೂಹಿಕ ಜನಪದ ಗೀತೆ, ಛದ್ಮವೇಷ ಸ್ಪರ್ಧೆ, ಮಹಿಳೆಯರ ಸ್ವ-ಉತ್ಪನ್ನ ಮಾರುಕಟ್ಟೆ ಸ್ಪರ್ಧೆ ಇರಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ ಮಹಿಳಾ ದಸರಾ ಲೋಗೋವನ್ನು ಅನಾವರಣ ಮಾಡಲಾಯಿತು. ಮಹಿಳಾ ದಸರಾ ಸಮಿತಿ ಉಪಾಧ್ಯಕ್ಷ ಕಡೆಮಾಡ ಕುಸುಮಾ ಜೊಯಪ್ಪ, ಧನಲಕ್ಷ್ಮೀ, ಕಾರ್ಯದರ್ಶಿ ಸಪೂರ ಬಾನು, ಖಜಾಂಚಿ ಸುನಿತಾ, ಗೌರವ ಅಧ್ಯಕ್ಷೆ ಚೈತ್ರಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net