ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಆ.29ರಂದು ವಿವಿಧ ಸ್ಪರ್ಧೆ ಆಯೋಜನೆ: ಮಂಡ್ಯ ಜಿಲ್ಲೆಯವರಿಗೆ ಮಾತ್ರ ಅವಕಾಶ

Sports
Published on

ಮಂಡ್ಯ: ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‌ಚಂದ್ ಜನ್ಮದಿನ ಹಾಗೂ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ರೋಟರಿ ಕ್ಲಬ್ ಸಹಯೋಗದಲ್ಲಿ ಆ.29ರಂದು ನಗರದ ಸರ್.ಎಂ.ವಿಶ್ವೇಶ್ವರಯ್ಯ ಒಳಾಂಗಣ ಕ್ರೀಡಾಂಗಣದ ಆವರಣದಲ್ಲಿ ವಿವಿಧ ಸ್ಪರ್ಧೆ ಆಯೋಜಿಸಲಾಗಿದೆ.

ವಾಕ್‌ರೇಸ್(ಮಹಿಳೆಯರಿಗೆ), ಟಗ್ ಆಫ್ ವಾರ್(ಮಹಿಳೆಯರಿಗೆ) ಸ್ಪರ್ಧೆಗೆ ನೋಂದಣಿ ಮಾಡಿಕೊಳ್ಳುವವರು ಕೆ.ಜೆ.ರೂಪಶ್ರೀ(ಮೊ.ಸಂ 7353097540), ಬ್ಯಾಡ್ಮಿಂಟನ್ ಡಬಲ್ಸ್(ಪುರುಷರು) ಕೃಷ್ಣ(ಮೊ.ಸಂ 9844311159), ಪುಟ್ಬಾಲ್ 5*5(ಪುರುಷರು) ಸಿ.ಬಿ.ಬಾಬುಗುರುರಾಜ್(ಮೊ.ಸಂ 9448855344), ಬಾಸ್ಕೆಟ್‌ಬಾಲ್ 3*3(ಪುರುಷ ಮತ್ತು ಮಹಿಳೆಯರ ವಿಭಾಗ) ಸಿ.ಬಿ.ಭರತ್‌ರಾಜ್(ಮೊ.ಸಂ 9916644007), ವಾಲಿಬಾಲ್(ಪುರುಷ ಮತ್ತು ಮಹಿಳೆಯರ ವಿಭಾಗ) ಬಿ.ಸೋಮಶೇಖರ್(ಮೊ.ಸಂ 9449686374)ಯನ್ನು ಆ.28ರಂದು ಮಧ್ಯಾಹ್ನ 3ಗಂಟೆಯೊಳಗೆ ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಬಹುದು. ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು. 16 ರಿಂದ 29 ವರ್ಷದೊಳಗಿನ ಜಿಲ್ಲೆಯವರಿಗೆ ಮಾತ್ರ ಅವಕಾಶವಿರಲಿದೆ. ಸ್ಫರ್ಧೆಯಲ್ಲಿ ಭಾಗವಹಿಸುವವರು ಆಧಾರ್‌ಕಾರ್ಡ್ ಪ್ರತಿಯನ್ನು ಕಡ್ಡಾಯವಾಗಿ ತರಬೇಕು. ನಗದು ಬಹುಮಾನದ ಮೊತ್ತವನ್ನು ಕೆ-2 ಮುಖಾಂತರ ನೀಡುವುದರಿಂದ ವಿಜೇತರು ಬ್ಯಾಂಕ್‌ಖಾತೆ ಪುಸ್ತಕದ ಮೊದಲ ಪುಟದ ನಕಲು ಪ್ರತಿ ಸಲ್ಲಿಸಬೇಕು. ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಡ್ಯ ಇಲ್ಲಿ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net