ವಿವಿಧ ಸ್ಪರ್ಧೆಯಲ್ಲಿ ಪೋತದಾರ ಕಾಲೇಜು ವಿದ್ಯಾರ್ಥಿಗಳ ಸಾಧನೆ

4Anand3
ನಗರದ ಕೆಎಲ್​ಎಸ್​ ವಸಂತರಾವ ಪೋತದಾರ ಪಾಲಿಟೆಕ್ನಿಕ್​ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲೆಯ ನಿಡಸೋಸಿಯ ಹಿರಾಶುಗರ್​ ಇಂಜಿನಿಯರಿಂಗ್​ ಕಾಲೇಜಿನಲ್ಲಿ ಈಚೆಗೆ ಏರ್ಪಡಿಸಿದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಎಸ್​.ಎಸ್​. ಮಾಳಾಜ, ಅನುರಾಧಾ ದೇಸಾಯಿ, ಪ್ರಥಮೇಶ ಗುರಜರ ಇತರರಿದ್ದರು.
Published on

ಬೆಳಗಾವಿ: ನಗರದ ಕೆಎಲ್​ಎಸ್​ ವಸಂತರಾವ ಪೋತದಾರ ಪಾಲಿಟೆಕ್ನಿಕ್​ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲೆಯ ನಿಡಸೋಸಿಯ ಹಿರಾಶುಗರ್​ ಇಂಜಿನಿಯರಿಂಗ್​ ಕಾಲೇಜಿನಲ್ಲಿ ಈಚೆಗೆ ಏರ್ಪಡಿಸಿದ ಪೊಜೆಕ್ಟ್​ ಸ್ಪರ್ಧೆ, ಇಂರ್ಟನಶಿಪ್​ ಪ್ರೆಸೆಂಟೇಶನ್​ ಹಾಗೂ ಆಯಿಡಿಯಾ ಸ್ಪರ್ಧೆಯಲ್ಲಿ ವಿಜೇತರಾಗಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

ಪ್ರೊಜೆಕ್ಟ್​ ಸ್ಪರ್ಧೆಯಲ್ಲಿ ಕಂಪ್ಯೂಟರ್​ ಸೈನ್ಸ್​ ಹಾಗೂ ಇಂಜಿನಿಯರಿಂಗ್​ 6ನೇ ಸೆಮಿಸ್ಟರ್​ ವಿದ್ಯಾರ್ಥಿಗಳಾದ ನಯಾಬ ಅತ್ತಾರ ಹಾಗೂ ಅವಿನಾಶ ಭಾಟಿ ಪ್ರಥಮ, ದಿಗಂಬರ ಪಾಲೇಕರ, ಶ್ರೀಪಾಟೀಲ, ಸುನೀಲ ಶಿಂಡೋಲಕರ ದ್ವೀತಿಯ ಸ್ಥಾನ ಪಡೆದುಕೊಂಡಿದ್ದಾರೆ. ಇಂರ್ಟನಶಿಪ್​ ಪ್ರೆಸೆಂಟೇಶನ್​ಸ್ಪರ್ಧೆಯಲ್ಲಿ ಮೆಕಾನಿಕಲ್​ ಇಂಜಿನಿಯರಿಂಗ್​ ವಿಭಾಗದ 6ನೇ ಸೆಮಿಸ್ಟರ್​ ವಿದ್ಯಾರ್ಥಿಗಳಾದ ಅಥರ್ವ ಕಸಬೇಕರ, ಆದಿತ್ಯಾ ಕಡ್ಡು ಹಾಗೂ ನಲಿನಿ ಚಂದಗಡಕರ ತೃತೀಯ ಸ್ಥಾನ ಪಡೆದಿದ್ದಾರೆ.

ಆಯಿಡಿಯಾ ಪ್ರೆಸೆಂಟೇಶನ್​ ಸ್ಪರ್ಧೆಯಲ್ಲಿ ಕಂಪ್ಯೂಟರ್​ ಸೈನ್ಸ್​ ಹಾಗೂ ಇಂಜಿನಿಯರಿಂಗ್​ 6ನೇ ಸೆಮಿಸ್ಟರ್​ ವಿದ್ಯಾರ್ಥಿಗಳಾದ ನಯಾಬ ಅತ್ತಾರ ಹಾಗೂ ಅವಿನಾಶ ಭಾಟಿ ದ್ವೀತಿಯ ಸ್ಥಾನ ಪಡೆದುಕೊಂಡಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಅಧ್ಯಕ್ಷ ಯು.ಎನ್​.ಕಾಲಕುಂದ್ರಿಕರ ಹಾಗೂ ಪ್ರಾಚಾರ್ಯ ಎಸ್​.ಎಸ್​. ಮಾಳಾಜ, ಅನುರಾಧಾ ದೇಸಾಯಿ, ಪ್ರಥಮೇಶ ಗುರಜರ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net